ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯು ಆರಂಭವಾಗಿದ್ದು, ಮೂರು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಇಂದು (ಮಾರ್ಚ್ 31) ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಲ್ಲನ್ಪುರದಲ್ಲಿ ಮುಖಾಮುಖಿಯಾಗಲಿವೆ.

18ನೇ ಆವೃತ್ತಿಯ ಐಪಿಎಲ್ಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಿ ಅರ್ಷದೀಪ್ ಸಿಂಗ್ ಅವರನ್ನು ಬರೋಬ್ಬರಿ ₹18 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಉಳಿಸಿಕೊಂಡಿದೆ. ಅವರು ಕಳೆದ ವರ್ಷ ಪಂಜಾಬ್ ಪರ 8.8ರ ಎಕಾನಮಿಯಲ್ಲಿ 21 ವಿಕೆಟ್ ಪಡೆದು ಮಿಂಚಿದ್ದರು.

ಜೊತೆಗೆ, ಅವರು ಐಪಿಎಲ್ 2025ರ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ವಿಜೇತ ಪ್ರಸಿದ್ಧ ಕೃಷ್ಣ, ನೂರ್ ಅಹ್ಮದ್, ಜೋಶ್ ಹ್ಯಾಜಲ್ವುಡ್ ಮತ್ತು ಟ್ರೆಂಟ್ ಬೌಲ್ಟ್ ಅವರ ನಂತರ 6ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೂ 82 ಪಂದ್ಯಗಳನ್ನು ಆಡಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು 97 ವಿಕೆಟ್ ಪಡೆದಿದ್ದಾರೆ. ಇನ್ನೂ 3 ವಿಕೆಟ್ ಪಡೆದರೆ, ಐಪಿಎಲ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 100 ವಿಕೆಟ್ ತಲುಪಿರುವು ಎಡಗೈ ವೇಗಿಗಳ ಸಾಲಿನಲ್ಲಿ ಸ್ಥಾನ ಪಡೆಯಲು ಅರ್ಷದೀಪ್ ಅವರಿಗೆ ಇನ್ನೂ 3 ವಿಕೆಟ್ ಮಾತ್ರ ಬೇಕು. ಐಪಿಎಲ್ನಲ್ಲಿ ಎಡಗೈ ವೇಗಿಗಳಾದ ಟ್ರೆಂಟ್ ಬೌಲ್ಟ್, ಜಹೀರ್ ಖಾನ್, ಆಶಿಶ್ ನೆಹ್ರಾ ಹಾಗೂ ಜಯದೇವ ಉನಾದ್ಕತ್ ಮಾತ್ರ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಸೀಸನ್ನಲ್ಲಿ ಅರ್ಷದೀಪ್ ಕೇಔಲ 3 ವಿಕೆಟ್ ಪಡೆದರೆ, ಈ ಸಾಧನೆ ಮಾಡಿದ ಐದನೇ ಎಡಗೈ ವೇಗಿ ಎಂಬ ದಾಖಲೆ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.