ಭಾನುವಾರ, ಆಗಸ್ಟ್ 18, 2019
24 °C

‘ಆರ್ಥರ್ ಅವಧಿ ವಿಸ್ತರಣೆ ರದ್ದು ಮಾಡಿದ್ದ ಇಮ್ರಾನ್’

Published:
Updated:

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಮಿಕ್ಕಿ ಆರ್ಥರ್ ಅವರ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲು ಪಿಸಿಬಿ ನಿರ್ಧರಿಸಿತ್ತು. ತರಬೇತಿ ಸಿಬ್ಬಂದಿ ಅವಧಿಯನ್ನು ವಿಸ್ತರಿಸದಿರುವಂತೆ ಪ್ರಧಾನಿ ಇಮ್ರಾನ್ ಖಾನ್ ಸೂಚಿಸಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದರೂ ಆರ್ಥರ್ ಅವರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸಲು ಪಿಸಿಬಿ ಮುಂದಾಗಿತ್ತು. ಪಿಸಿಬಿ ಮುಖ್ಯಸ್ಥ ಎಹಸಾನ್ ಮಣಿ  ಈ ವಿಷಯವನ್ನು ಇಮ್ರಾನ್ ಖಾನ್ ಗಮನಕ್ಕೆ ತಂದಿದ್ದರು. 1992ರಲ್ಲಿ ವಿಶ್ವಕಪ್ ಗೆದ್ದ ಪಾಕ್ ತಂಡಕ್ಕೆ ಇಮ್ರಾನ್ ನಾಯಕರಾಗಿದ್ದರು.

Post Comments (+)