ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಟೆಸ್ಟ್: ರೋರಿ ಚೊಚ್ಚಲ ಶತಕ

Last Updated 20 ಆಗಸ್ಟ್ 2019, 4:27 IST
ಅಕ್ಷರ ಗಾತ್ರ

ಎಜ್‌ಬಾಸ್ಟನ್ (ಎಎಫ್‌ಪಿ/ರಾಯಿಟರ್ಸ್): ಎಡಗೈ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್‌ (ಬ್ಯಾಟಿಂಗ್‌ 125; 282ಎ, 16ಬೌಂ) ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿದ ಚೊಚ್ಚಲ ಶತಕವು ಶುಕ್ರವಾರ ಇಂಗ್ಲೆಂಡ್ ತಂಡದ ಹೋರಾಟಕ್ಕೆ ಬಲ ತುಂಬಿತು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯರು ದಿನ ದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 267ರನ್‌ ಕಲೆಹಾಕಿದರು. ಆಂಗ್ಲರ ನಾಡಿನ ತಂಡವು ಆಸ್ಟ್ರೇ ಲಿಯಾದ ಲೆಕ್ಕ ಚುಕ್ತಾ ಮಾಡಲು ಇನ್ನು 17ರನ್‌ ಗಳಿಸಬೇಕಿದೆ. ಟೀಮ್‌ ‍ಪೇನ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ 284 ರನ್‌ ಪೇರಿಸಿತ್ತು.

ಎರಡನೇ ದಿನ ತವರಿನ ಅಭಿಮಾನಿ ಗಳನ್ನು ರಂಜಿಸಿದ್ದು ರೋರಿ. ಅವರು 224 ಎಸೆತಗಳನ್ನು ಎದುರಿಸಿ ಶತಕ ದಾಖಲಿಸಿದರು. ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಜೇಸನ್ ರಾಯ್ ಔಟಾ ದರು. ಇದರಿಂದ ತಂಡವು ತುಸು ಆತಂಕ ಎದುರಿಸಿತ್ತು. ರೋರಿ ಜೊತೆಗೂಡಿದ ನಾಯಕ ಜೋ ರೂಟ್ (57; 119ಎ, 6ಬೌಂ) ಎರಡನೇ ವಿಕೆಟ್‌ಗೆ 132 ರನ್‌ ಸೇರಿಸಿದರು. ಹೀಗಾಗಿ ತಂಡದ ಮೊತ್ತ 150ರ ಗಡಿ ದಾಟಿತು.

50ನೇ ಓವರ್‌ನಲ್ಲಿ ರೂಟ್ ಔಟಾ ದರು. ಇದರ ಬೆನ್ನಲ್ಲೇ ಜೋ ಡೆನ್ಲಿ (18) ಮತ್ತು ಜೋಸ್ ಬಟ್ಲರ್ (5) ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಪ್ಯಾಟ್ ಕಮಿನ್ಸ್‌, ಪೀಟರ್ ಸಿಡ್ಲ್ ಮತ್ತು ಪ್ಯಾಟಿನ್ಸನ್ ಉತ್ತಮ ಬೌಲಿಂಗ್ ಮಾಡಿದರು.

ಪ್ರಮುಖರು ಬೇಗನೆ ವಿಕೆಟ್‌ ನೀಡಿ ದರೂ ‌ಅಂಜದ ರೋರಿ ಛಲದಿಂದ ಆಡಿದರು. 99 ರನ್‌ ಗಳಿಸಿದ್ದಾಗಲೂ ಶತಕಕ್ಕೆ ಆತುರಪಡಲಿಲ್ಲ. ಒಂದು ರನ್‌ ಗಳಿಸಲು 18 ಎಸೆತಗಳನ್ನು ಆಡಿದ್ದು ಇದಕ್ಕೆ ಸಾಕ್ಷಿ. ಅವರಿಗೆ ಬೆನ್‌ ಸ್ಟೋಕ್ಸ್‌ (ಬ್ಯಾಟಿಂಗ್‌ 38; 71ಎ, 6ಬೌಂ) ಉತ್ತಮ ಬೆಂಬಲ ನೀಡಿದರು. ಇವರು ಮುರಿಯದ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 73ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್; 80.4 ಓವರ್‌ಗಳಲ್ಲಿ 284. ಇಂಗ್ಲೆಂಡ್: ಮೊದಲ ಇನಿಂಗ್ಸ್‌; 90 ಓವರ್‌ಗಳಲ್ಲಿ 4 ವಿಕೆಟ್‌ಗೆ 267 (ರೋರಿ ಬರ್ನ್ಸ್‌ ಬ್ಯಾಟಿಂಗ್ 125, ಜೇಸನ್ ರಾಯ್ 10, ಜೋ ರೂಟ್ 57, ಜೋ ಡೆನ್ಲಿ 18, ಬೆನ್ ಸ್ಟೋಕ್ಸ್ ಬ್ಯಾಟಿಂಗ್ 38).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT