ಸೋಮವಾರ, ನವೆಂಬರ್ 18, 2019
22 °C

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಶ್ವಿನ್

Published:
Updated:
Prajavani

ನವದೆಹಲಿ: ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

ವಾಣಿಜ್ಯ ವಿನಿಮಯ (ಟ್ರೇಡ್ ಆಫ್‌) ಒಪ್ಪಂದದ ಮೇರೆಗೆ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಅಶ್ವಿನ್ ಅವರನ್ನು ಡೆಲ್ಲಿಗೆ ನೀಡುತ್ತಿದೆ. ಅದರ ಬದಲಿಗೆ ಪಂಜಾಬ್ ತಂಡವು ಇಬ್ಬರು ಆಟಗಾರರನ್ನು ಪಡೆಯುವ ಸಾಧ್ಯತೆ ಇದೆ.

2020ರ ಐಪಿಎಲ್ ಟೂರ್ನಿಯಲ್ಲಿ  ಅಶ್ವಿನ್ ಡೆಲ್ಲಿ ತಂಡದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈಚೆಗೆ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ನೇಮಕವಾಗಿದ್ದಾರೆ. ಅವರು ತಂಡವನ್ನು ಬಲಿಷ್ಠಗೊಳಿಸಲು ಕೆಲವು ಬದಲಾವಣೆಗಳಿಗೆ ಕೈಹಾಕಿದ್ದಾರೆ. ಇದೇ ಕಾರಣಕ್ಕೆ ಅಶ್ವಿನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಒಲವು ಹೊಂದಿದ್ಧಾರೆ ಎನ್ನಲಾಗಿದೆ.

‘ಅಶ್ವಿನ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಅದರ ಬದಲಿಗೆ ಇಬ್ಬರು ಆಟಗಾರರನ್ನು ಡೆಲ್ಲಿ ತಂಡವು ಬಿಟ್ಟುಕೊಡುತ್ತಿದೆ. ಇದಕ್ಕೆ ಸಂಬಂಧಿಸಿದ ಬಹುತೇಕ ಪ್ರಕ್ರಿಯೆಗಳು ಮುಗಿದಿವೆ’ ಎಂದು ಬಿಸಿಸಿಐನ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)