ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಿನ್‌ ಭಾರತದ ಶ್ರೇಷ್ಠ ಸ್ಪಿನ್ನರ್: ಸಕ್ಲೈನ್‌ ಮುಷ್ತಾಕ್‌

Last Updated 26 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ‘ರವಿಚಂದ್ರನ್‌ ಅಶ್ವಿನ್‌ ಅವರು ಭಾರತದ ಶ್ರೇಷ್ಠ ಸ್ಪಿನ್ನರ್‌. ಅವರನ್ನು ಏಕದಿನ ತಂಡದಿಂದ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಸಕ್ಲೈನ್‌ ಮುಷ್ತಾಕ್‌ ತಿಳಿಸಿದ್ದಾರೆ.

2017ರ ಜುಲೈ ಬಳಿಕ ಅಶ್ವಿನ್‌ ಅವರಿಗೆ ಏಕದಿನ ಮತ್ತು ಟ್ವೆಂಟಿ–20 ಮಾದರಿಯಲ್ಲಿ ಆಡುವ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

‘ಟೆಸ್ಟ್‌ ಮಾದರಿಯಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಔಟ್‌ ಮಾಡಬೇಕೆಂಬುದು ಅಶ್ವಿನ್‌ಗೆ ಚೆನ್ನಾಗಿ ತಿಳಿದಿದೆ. ಶ್ರೇಷ್ಠ ಸ್ಪಿನ್ನರ್‌ ಒಬ್ಬರನ್ನು ಏಕದಿನ ತಂಡದಿಂದ ಹೊರಗಿಟ್ಟಿರುವುದು ಏಕೆ ಎಂಬುದು ನನಗೆ ತಿಳಿಯುತ್ತಿಲ್ಲ’ ಎಂದಿದ್ದಾರೆ.

‘ಅಶ್ವಿನ್‌ ತಂಡದಲ್ಲಿದ್ದಾಗ ಹರಭಜನ್‌ ಸಿಂಗ್‌ ಅವರನ್ನು ಕಡೆಗಣಿಸ ಲಾಯಿತು. ಈಗ ಅಶ್ವಿನ್‌ ಅವರನ್ನು ಹೊರಗಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಅವರ‍್ಯಾರು ಅಶ್ವಿನ್‌ ಹಾಗೆ ಶ್ರೇಷ್ಠ ಸಾಮರ್ಥ್ಯ ತೋರುತ್ತಿಲ್ಲ. ಹರಭಜನ್‌ ಅವರನ್ನು ತಂಡದಿಂದ ಹೊರಗಿಟ್ಟಾಗಲೂ ನನಗೆ ಆಶ್ಚರ್ಯವಾಗಿತ್ತು. ಅಶ್ವಿನ್‌ ಹಾಗೂ ಹರಭಜನ್‌ ಅವರ ಬೌಲಿಂಗ್‌ ಶೈಲಿ ಭಿನ್ನವಾಗಿತ್ತು. ಇಬ್ಬರು ಬಲಗೈ ವೇಗಿಗಳಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡ ಲಾಗುತ್ತದೆ. ಆದರೆ ಇಬ್ಬರು ಬಲಗೈ ಸ್ಪಿನ್ನರ್‌ಗಳನ್ನು ಆಡಿಸಲು ಹಿಂದೇಟು ಹಾಕಲಾಗುತ್ತದೆ. ಇದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಟೆಸ್ಟ್‌ ಮಾದರಿಯಲ್ಲಿ 700 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಹರಭಜನ್‌ ಸಿಂಗ್‌ ಅವರಿಗೆ ಇತ್ತು. ಆದರೆ ಅವರಿಗೆ ಸರಿಯಾಗಿ ಅವಕಾಶಗಳು ಸಿಗಲಿಲ್ಲ. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಇನ್ನಷ್ಟು ಸಮಯ ಕ್ರಿಕೆಟ್‌ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇವರಿಬ್ಬರೂ ತಲಾ 100 ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದಾರೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT