ಅಭ್ಯಾಸದ ವೇಳೆ ದೋನಿಯನ್ನು ಭೇಟಿ ಮಾಡಿದ ಪಾಕ್‌ ಕ್ರಿಕೆಟಿಗ ಶೋಯಬ್ ಮಲಿಕ್

7

ಅಭ್ಯಾಸದ ವೇಳೆ ದೋನಿಯನ್ನು ಭೇಟಿ ಮಾಡಿದ ಪಾಕ್‌ ಕ್ರಿಕೆಟಿಗ ಶೋಯಬ್ ಮಲಿಕ್

Published:
Updated:

ದುಬೈ: ಇಲ್ಲಿ ನಡೆಯಲಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಅಂಗವಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈಗೆ ಬಂದಿಳಿದಿದ್ದು, ಅಭ್ಯಾಸದ ವೇಳೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಅವರನ್ನು ಪಾಕಿಸ್ತಾನದ ಮಾಜಿ ನಾಯಕ ಶೋಯಬ್‌ ಮಲಿಕ್‌ ಭೇಟಿ ಮಾಡಿ ಪರಸ್ಪರ ಮಾತುಕತೆ ನಡೆಸಿದ್ದಾರೆ.

ದೋನಿಯನ್ನು ಭೇಟಿಯಾದ ಸಂದರ್ಭದಲ್ಲಿ ಶೋಯಬ್‌ ತಮ್ಮ ಟೋಪಿ ತೆಗೆದು ಗೌರವ ಸೂಚಿಸಿದ್ದಾರೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗೆ ಸಾಕ್ಷಿಯಾಗಿದೆ.

ಸೆ.15ರಿಂದ (ಶನಿವಾರ) ಟೂರ್ನಿ ಆರಂಭವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ–ಬಾಂಗ್ಲಾ ತಂಡಗಳು ಮುಖಾಮುಖಿಯಾಗಲಿವೆ.

321 ಏಕದಿನ ಪಂದ್ಯಗಳನ್ನು ಆಡಿರುವ ದೋನಿ ಅವರ ಮೇಲೆ ಈ ಬಾರಿ ನಿರೀಕ್ಷೆ ಇಡಲಾಗಿದೆ.

ಸೆ.18ರಂದು ರೋಹಿತ್‌ ಶರ್ಮಾ ನಾಯಕತ್ವದ ಭಾರತ ಹಾಂಕ್‌ಕಾಂಗ್‌ ವಿರುದ್ಧ ಸೆಣಸಾಡಲಿದೆ.

19ರಂದು ಸಂಪ್ರಾದಾಯಿಕ ಎದುರಾಳಿಗಳಾದ ಭಾರತ–ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ.

*

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !