ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup 2022: ಭಾರತ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ, ಬೌಲಿಂಗ್ ಆಯ್ಕೆ

Last Updated 6 ಸೆಪ್ಟೆಂಬರ್ 2022, 13:56 IST
ಅಕ್ಷರ ಗಾತ್ರ

ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ‘ಸೂಪರ್‌ 4’ ಹಂತದ ಪಂದ್ಯದಲ್ಲಿ ಮಂಗಳವಾರ ಭಾರತ – ಶ್ರೀಲಂಕಾ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಭಾರತದ ವಿರುದ್ಧ ಟಾಸ್‌ ಗೆದ್ದಿರುವ ಶ್ರೀಲಂಕಾ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಪಾಕಿಸ್ತಾನದ ಎದುರಿನ ಸೋಲಿನ ನಿರಾಶೆಯಿಂದ ಹೊರಬರುವ ಪ್ರಯ‌ತ್ನದಲ್ಲಿರುವ ರೋಹಿತ್‌ ಶರ್ಮ ಬಳಗಕ್ಕೆ ಟೂರ್ನಿಯಲ್ಲಿ ಫೈನಲ್‌ ಪ್ರವೇಶದ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಪಾಕ್‌ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದು ಚಿಂತೆಗೆ ಕಾರಣವಾಗಿದೆ. ಜಸ್‌ಪ್ರೀತ್‌ ಬೂಮ್ರಾ ಮತ್ತು ಹರ್ಷಲ್‌ ಪಟೇಲ್‌ ಅವರ ಅನುಪಸ್ಥಿತಿಯಿಂದಭಾರತದ ಬೌಲಿಂಗ್‌ ವಿಭಾಗ ಟೂರ್ನಿಗೆ ಮುನ್ನವೇ ಬಲ ಕಳೆದುಕೊಂಡಿತ್ತು. ಆಲ್‌ರೌಂಡರ್‌ ರವೀಂದ್ರ ಜಡೇಜ ಗಾಯದಿಂದ ಹೊರಬಿದ್ದಿರುವುದು ಸಂಕಷ್ಟವನ್ನು ಹೆಚ್ಚಿಸಿದೆ.

ಇತ್ತ ಸತತ ಎರಡು ಗೆಲುವಿನ ಆತ್ಮವಿಶ್ವಾಸದಲ್ಲಿರುವ ಶ್ರೀಲಂಕಾ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ದಸುನ್‌ ಶನಕ ಬಳಗ ಲೀಗ್‌ ಹಂತದಲ್ಲಿ ಬಾಂಗ್ಲಾದೇಶ ತಂಡವನ್ನು ಹಾಗೂ ‘ಸೂಪರ್‌ 4’ನ ಮೊದಲ ಪಂದ್ಯದಲ್ಲಿ ಅಫ್ಗಾನಿಸ್ತಾನವನ್ನು ಮಣಿಸಿತ್ತು.

ತಂಡಗಳು
ಭಾರತ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್

ಶ್ರೀಲಂಕಾ: ದಸುನ್‌ ಶನಕ (ನಾಯಕ), ಧನುಷ್ಕಾ ಗುಣತಿಲಕ, ಚರಿತ್‌ ಅಸಲಂಕಾ, ಪಥುಮ್‌ ನಿಸ್ಸಾಂಕ, ಕುಸಾಲ್‌ ಮೆಂಡಿಸ್, ಭಾನುಕ ರಾಜಪಕ್ಸ, ದಿಲ್ಶನ್ ಮಧುಶನಕ, ವನಿಂದು ಹಸರಂಗ, ಚಮಿಕ ಕರುಣರತ್ನೆ, ಮತೀಶ ಪತಿರನ, ಅಸಿತ ಫೆರ್ನಾಂಡೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT