ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಟಿ20 ಕ್ರಿಕೆಟ್: ಮೆಂಡಿಸ್‌- ಪಥುಮ್ ಮಿಂಚು, ಶ್ರೀಲಂಕಾ ಜಯಭೇರಿ

ಗುರ್ಬಾಜ್ ಆಟ ವ್ಯರ್ಥ
Last Updated 3 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ಶಾರ್ಜಾ: ಬ್ಯಾಟರ್‌ಗಳ ಸಂಘಟಿತ ಆಟದ ಬಲದಿಂದ ಶ್ರೀಲಂಕಾ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಸೂಪರ್ ಫೋರ್ ಪಂದ್ಯದಲ್ಲಿ ಜಯ ಗಳಿಸಿತು.

ಶಾರ್ಜಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಅಫ್ಗಾನಿಸ್ತಾನ ತಂಡಕ್ಕೆ ಸೋಲುಣಿಸಿತು. ಟಾಸ್‌ ಗೆದ್ದ ಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ರೆಹಮಾನುಲ್ಲಾ ಗುರ್ಬಾಜ್‌(84; 45ಎಸೆತ) ಅಮೋಘ ಬ್ಯಾಟಿಂಗ್ ನೆರವಿನಿಂದಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 175 ರನ್‌ಗಳನ್ನು ಗಳಿಸಿತು. ಶ್ರೀಲಂಕಾ ಈ ಗುರಿಯನ್ನು 19.1 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ತಲುಪಿತು.

ಲಂಕಾದ ಕುಶಾಲ್ ಮೆಂಡಿಸ್‌ (36), ಪಥುಮ್ ನಿಸ್ಸಂಕಾ (35) ಮೊದಲ ವಿಕೆಟ್‌ ಜೊತೆಯಾಟದಲ್ಲಿ 62 ರನ್ ಸೇರಿಸಿ ಭದ್ರಬುನಾದಿ ಹಾಕಿ ಕೊಟ್ಟರು. ಬಳಿಕ ಧನುಷ್ಕ ಗುಣತಿಲಕ (33) ಮತ್ತು ಭಾನುಕ ರಾಜಪಕ್ಷ (31) ಗೆಲುವಿಗೆ ಕೊಡುಗೆ ನೀಡಿದರು.

ಅಫ್ಗನ್ ತಂಡಕ್ಕಾಗಿ ಮುಜೀಬುರ್ ರೆಹಮಾನ್‌ (30ಕ್ಕೆ 2) ಮತ್ತು ನವೀನ್ ಉಲ್ ಹಕ್‌ (40ಕ್ಕೆ 2‌) ತಲಾ ಎರಡು ವಿಕೆಟ್‌ ಗಳಿಸಿದರು.

ಅಫ್ಗಾನಿಸ್ತಾನ ಬ್ಯಾಟಿಂಗ್‌ನಲ್ಲಿ ಇಬ್ರಾಹಿಂ ಜದ್ರಾನ್ (40) ಮಿಂಚಿದರು. ನಜೀಬುಲ್ಲಾ ಜದ್ರಾನ್‌ 17 ರನ್‌ ಗಳಿಸಿ ಅಲ್ಪಕಾಣಿಕೆ ನೀಡಿದ್ದರು.

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 6ಕ್ಕೆ 175 (ರೆಹಮಾನುಲ್ಲಾ ಗುರ್ಬಾಜ್ 84, ಇಬ್ರಾಹಿಂ ಜದ್ರಾನ್ 40, ನಜೀಬುಲ್ಲಾ ಜದ್ರಾನ್ 17, ದಿಲ್ಶಾನ್ ಮಧುಶಂಕಾ 37ಕ್ಕೆ2).

ಶ್ರೀಲಂಕಾ: 19.1 ಓವರ್‌ಗಳಲ್ಲಿ 6ಕ್ಕೆ 179 (ಪಥುಮ್ ನಿಸ್ಸಂಕಾ 35, ಕುಶಾಲ್ ಮೆಂಡಿಸ್‌ 36, ಧನುಷ್ಕಾ ಗುಣತಿಲಕ 33, ಭಾನುಕ ರಾಜಪಕ್ಷ 31, ವನಿಂದು ಹಸರಂಗ ಔಟಾಗದೆ 16; ಮುಜೀಬುರ್‌ ರೆಹಮಾನ್‌ 30ಕ್ಕೆ 2, ನವೀನ್ ಉಲ್ ಹಕ್‌ 40ಕ್ಕೆ 2, ರಶೀದ್‌ ಖಾನ್‌ 39ಕ್ಕೆ 1, ಮೊಹಮ್ಮದ್ ನಬಿ 34ಕ್ಕೆ 1).

ಫಲಿತಾಂಶ: ಶ್ರೀಲಂಕಾಕ್ಕೆ 4 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT