ಟೆಸ್ಟ್‌ ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ಸೋಲು; ಮಯಂಕ್ ಏಕಾಂಗಿ ಹೋರಾಟ ವ್ಯರ್ಥ

7
ಆಸ್ಟ್ರೇಲಿಯಾ ‘ಎ’ ತಂಡದ ಜಯಭೇರಿ

ಟೆಸ್ಟ್‌ ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ಸೋಲು; ಮಯಂಕ್ ಏಕಾಂಗಿ ಹೋರಾಟ ವ್ಯರ್ಥ

Published:
Updated:

ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಯಂಕ್ ಅಗರವಾಲ್ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ.  ಆದರೆ ಎಡಗೈ ಸ್ಪಿನ್ನರ್ ಜಾನ್ ಹಾಲೆಂಡ್ ಅವರ ಆಟದಿಂದ ಆಸ್ಟ್ರೇಲಿಯಾ ‘ಎ’ ತಂಡಕ್ಕೆ ಜಯ ಒಲಿಯಿತು.

ಚೆಂಡು ನಿಧಾನಗತಿಯಲ್ಲಿ ಪುಟಿದೇಳುತ್ತಿದ್ದ ಪಿಚ್‌ನಲ್ಲಿ ಭಾರತ ‘ಎ’ ತಂಡದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಇದರಿಂದಾಗಿ 98 ರನ್‌ಗಳ ಸೋಲಿಗೆ ತಂಡವು ಶರಣಾಗಬೇಕಾಯಿತು. ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ‘ಎ’ ತಂಡವು 1–0 ಮುನ್ನಡೆ ಸಾಧಿಸಿತು. ‌

ಮಂಗಳವಾರ ಸಂಜೆ 262 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಭಾರತ ’ಎ’ ತಂಡವು 61 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು ಬುಧವಾರ 199 ರನ್‌ಗಳ ನ್ನು ಗಳಿಸಿ ಗೆಲುವಿನ ದಡ ಸೇರುವ ಆತಿಥೇಯ ತಂಡದ ಯೋಜನೆಗೆ ಪ್ರವಾಸಿ ಬಳಗದ ಜಾನ್ ಹಾಲೆಂಡ್ (81ಕ್ಕೆ6) ಪೆಟ್ಟು ನೀಡಿದರು.ದೇಶಿ ಕ್ರಿಕೆಟ್‌ನ ‘ರನ್‌ ಯಂತ್ರ’ ಮಯಂಕ್ ಅಗರವಾಲ್ (80; 189ಎಸೆತ, 9ಬೌಂಡರಿ, 1ಸಿಕ್ಸರ್) ಅವರ ಹೋರಾಟಕ್ಕೆ ಅಂಕಿತ್ ಭಾವ್ನೆ ಬಿಟ್ಟರೆ ಉಳಿದವರಿಂದ ಬೆಂಬಲ ಸಿಗಲಿಲ್ಲ.

ಬೆಳಿಗ್ಗೆ ಅಂಕಿತ್ ಭಾವ್ನೆ (25 ರನ್)ಮಾತ್ರ ಮಯಂಕ್ ಅವರೊಂದಿಗೆ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 73 ರನ್ ಸೇರಿಸಿದರು. ಆದರೆ ನಂತರ ಬಂದವರು ಎದುರಾಳಿ ತಂಡದ ವೇಗಿಗಳು ಹಾಕುತ್ತಿದ್ದ ಶಾಟ್‌ ಪಿಚ್ ಎಸೆತಗಳು ಹಾಗೂ ಸ್ಪಿನ್ನರ್‌ಗಳ ತಂತ್ರಗಳನ್ನು ಎದುರಿಸಿ ನಿಲ್ಲುವ ತಾಳ್ಮೆ ತೋರಲಿಲ್ಲ.ಅದರಲ್ಲೂ ಕೃಷ್ಣಪ್ಪ ಗೌತಮ್ ಮತ್ತು ಕೆ.ಎಸ್‌. ಭರತ್ ಸೊನ್ನೆ ಸುತ್ತಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಇದರಿಂದಾಗಿ ಊಟೆ ವಿರಾಮದ ವೇಳೆಗೆ 128 ರನ್‌ಗಳಿಗೆ 6 ವಿಕೆಟ್‌ಗಳು ಪತನವಾದವು.135 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಮಯಂಕ್ ವಿರಾಮದ ನಂತರ ವೇಗವಾಗಿ ರನ್‌ ಗಳಿಸುವತ್ತ ಚಿತ್ತ ನೆಟ್ಟರು. ಆದರೆ, ಇನ್ನೊಂದೆಡೆ ವಿಕೆಟ್‌ಗಳು ಪತನವಾದವು.  60ನೇ ಓವರ್‌ನಲ್ಲಿ ಮಯಂಕ್ ಅವರು ಜಾನ್‌ ಹಾಲೆಂಡ್ ಎಸೆತದಲ್ಲಿ   ಔಟಾದರು. ನಂತರದ ಕೆಲವೇ ನಿಮಿಷಗಳಲ್ಲಿ ಭಾರತ ‘ಎ’ ತಂಡದ ಹೋರಾಟಕ್ಕೆ ತೆರೆ ಬಿದ್ದಿತು. 

‘ನಮ್ಮ ಬ್ಯಾಟ್ಸ್‌ಮನ್‌ಗಳು ಇನ್ನೂ ಉತ್ತಮವಾಗಿ ಆಡಬೇಕಿತ್ತು. ಮೊದಲ ಇನಿಂಗ್ಸ್‌ನಲ್ಲಿ 31 ರನ್‌ಗಳ ಮುನ್ನಡೆಯ ಬದಲು ಇನ್ನೂ ಹೆಚ್ಚಿನ ಮುನ್ನಡೆ ಸಾಧಿಸಬೇಕಿತ್ತು. ಅದರಿಂದ ನಮಗೆ ಎರಡನೇ ಇನಿಂಗ್ಸ್‌ನಲ್ಲಿಯೂ  ಉತ್ತಮ ಇನಿಂಗ್ಸ್‌ ಕಟ್ಟಲು ಸಾಧ್ಯವಾಗುತ್ತಿತ್ತು’ ಎಂದು ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.

ಸ್ಕೋರ್
ಮೊದಲ ಇನಿಂಗ್ಸ್‌: 
ಆಸ್ಟ್ರೇಲಿಯಾ ’ಎ’ 243
ಭಾರತ ’ಎ’ 274

ಎರಡನೇ ಇನಿಂಗ್ಸ್‌
ಆಸ್ಟ್ರೇಲಿಯಾ ’ಎ’ 292
ಭಾರತ ’ಎ’  163 (59.3 ಓವರ್‌ಗಳಲ್ಲಿ)

ಮಯಂಕ್ ಅಗರವಾಲ್ ಬ್ಯಾಟಿಂಗ್ 56

ಅಂಕಿತ್ ಭಾವ್ನೆ ಬಿ ಜಾನ್ ಹಾಲೆಂಡ್ 25

ಆರ್. ಸಮರ್ಥ್ ಸಿ ಮತ್ತು ಬಿ ಟ್ರಾವಿಸ್ ಹೆಡ್ 08

ಕೆ.ಎಸ್. ಭರತ್ ಸಿ ಪೀಟರ್ ಹ್ಯಾಂಡ್ಸ್‌ಕಂಬ್ ಬಿ ಬ್ರೆಂಡನ್ ಡಾಜೆಟ್ 00

ಕೃಷ್ಣಪ್ಪ ಗೌತಮ್ ಎಲ್‌ಬಿಡಬ್ಲ್ಯು ಜಾನ್ ಹಾಲೆಂಡ್ 00

ಕುಲದೀಪ್ ಯಾದವ್ ಸಿ ಅಲೆಕ್ಸ್‌ ಕ್ಯಾರಿ ಬಿ ಬ್ರೆಂಡನ್ ಡಾಜೆಟ್ 02

ಮೊಹಮ್ಮದ್ ಸಿರಾಜ್ ಔಟಾಗದೆ 00

ಇತರೆ: 11 (ನೋಬಾಲ್ 1, ವೈಡ್ 1, ಬೈ 9, ಲೆಗ್‌ಬೈ 1)

ವಿಕೆಟ್ ಪತನ: 3–106 (ಅಂಕಿತ್; 37.2), 4–124 (ಸಮರ್ಥ್; 45.4), 5–125 (ಭರತ್: 46.2), 6–126 (ಗೌತಮ್; 47.6), 7-135 (ಕುಲದೀಪ್; 52.1), 8–152 (ಸಿರಾಜ್; 55.4), 9–163 (ಮಯಂಕ್; 59.2), 10–163 (ರಜಪೂತ್; 59.3).
 

ಬೌಲಿಂಗ್

ಕ್ರಿಸ್ ಟ್ರೆಮೆನ್ 10–3–26–1, ಬ್ರೆಂಡನ್ ಡಾಜೆಟ್ 11–2–26–2, ಜಾನ್ ಹಾಲೆಂಡ್ 24.3–2–81–6, ಮೈಕೆಲ್ ನೆಸೆರ್ 11–3–14–0, ಮಾರ್ನಸ್ ಲಾಬುಚಾನ್ 1–0–2–0, ಟ್ರಾವಿಸ್ ಹೆಡ್ 2–1–4–1.

ಫಲಿತಾಂಶ: ಆಸ್ಟ್ರೇಲಿಯಾ ಎ ತಂಡಕ್ಕೆ 98 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.

ಮುಂದಿನ ಪಂದ್ಯ: ಸೆ. 8ರಿಂದ

ಸ್ಥಳ: ಕೆಎಸ್‌ಸಿಎ ಕ್ರೀಡಾಂಗಣ, ಆಲೂರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !