ಮಂಗಳವಾರ, ಮಾರ್ಚ್ 28, 2023
22 °C
ಸಮಾಧಾನಕರ ಜಯಕ್ಕೆ ಮಹಮ್ಮುದುಲ್ಲಾ ಪಡೆಯ ಪ್ರಯತ್ನ

T20 World Cup: ಫಿಂಚ್‌ ಬಳಗಕ್ಕೆ ಬಾಂಗ್ಲಾ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಇಂಗ್ಲೆಂಡ್ ಎದುರಿನ ಸೋಲಿನ ಬಳಿಕ ಬ್ಯಾಟಿಂಗ್‌ ನ್ಯೂನ್ಯತೆಗಳನ್ನು ಸುಧಾರಿಸಿಕೊಳ್ಳುವತ್ತ ಚಿತ್ತ ನೆಟ್ಟಿರುವ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಬಾಂಗ್ಲಾದೇಶ ಸವಾಲಿಗೆ ಸಜ್ಜಾಗಿದೆ.

ಒಂದನೇ ಗುಂಪಿನಲ್ಲಿ, ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿರುವ ಕಾಂಗರೂ ನಾಡಿನ ಬಳಗ, ಸೆಮಿಫೈನಲ್‌ಗೆ ಅತಿ ಸನಿಹದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿರುವ ಬಾಂಗ್ಲಾದೇಶ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ.

ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ನಾಯಕ ಆ್ಯರನ್ ಫಿಂಚ್‌ ಉತ್ತಮ ಮೊತ್ತ ಪೇರಿಸಿದ್ದರೂ ಅಸ್ಥಿರ ಬ್ಯಾಟಿಂಗ್‌  ಆಸ್ಟ್ರೇಲಿಯಾ ತಂಡದಲ್ಲಿ ಕಳವಳಕ್ಕೆ ಕಾರಣವಾಗಿದೆ.

ಗ್ಲೆನ್‌ ಮ್ಯಾಕ್ಸ್‌ವೆಲ್ ಅಬ್ಬರಿಸುತ್ತಿಲ್ಲ. ಇನಿಂಗ್ಸ್‌ನ ಕಡೆಯ ಓವರ್‌ಗಳಲ್ಲಿ ಹೆಚ್ಚಿನ ರನ್‌ ಗಳಿಕೆಗೆ ತಂಡವು ಗ್ಲೆನ್‌, ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ಮ್ಯಾಥ್ಯು ವೇಡ್‌ ಅವರನ್ನು ಅವಲಂಬಿಸಿದೆ. ಬೌಲಿಂಗ್‌ನಲ್ಲಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್‌ ಮತ್ತು ಮಿಚೆಲ್ ಸ್ಟಾರ್ಕ್ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

ಆಸ್ಟ್ರೇಲಿಯಾ ಎದುರು ಸಮಧಾನಕರ ಗೆಲುವಿಗಾಗಿ ಮಹಮ್ಮುದುಲ್ಲಾ ನಾಯಕತ್ವದ ಬಾಂಗ್ಲಾ ಪ್ರಯತ್ನಿಸಲಿದೆ. ಗಾಯಗೊಂಡಿರುವ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಅವರ ಅನುಪಸ್ಥಿತಿಯು ತಂಡದ ಚಿಂತೆಗೆ ಕಾರಣವಾಗಿದೆ.

ಟಿ20 ರ‍್ಯಾಂಕಿಂಗ್‌

ಆಸ್ಟ್ರೇಲಿಯಾ 6

ಬಾಂಗ್ಲಾದೇಶ 9

 

ಟಿ20 ವಿಶ್ವಕಪ್ ಮುಖಾಮುಖಿ

ಪಂದ್ಯಗಳು 4

ಆಸ್ಟ್ರೇಲಿಯಾ ಜಯ 4

ಬಾಂಗ್ಲಾದೇಶ 0

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು