ಗುರುವಾರ , ಜೂನ್ 30, 2022
24 °C

ಆಸ್ಟ್ರೇಲಿಯಾ ಎದುರು ಮೂರನೇ ಟೆಸ್ಟ್ : ಸರಣಿ ಜಯದ ಮೇಲೆ ಪಾಕಿಸ್ತಾನ ಕಣ್ಣು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಾಹೋರ್: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಸೋಮವಾರ ಇಲ್ಲಿ ಆರಂಭವಾಗಲಿರುವ  ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಜಯ ಒಲಿಯಲಿದೆ. 

ಈ ಸರಣಿಯ ಮೊದಲ ಎರಡು ಪಂದ್ಯಗಳು ಡ್ರಾ ಆಗಿವೆ. ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಆಸ್ಟ್ರೇಲಿಯಾದ ಜಯದ ಆಸೆಗೆ ತಣ್ಣೀರೆರಚುವಲ್ಲಿ ಬಾಬರ್ ಆಜಂ ತಂಡದ ಬ್ಯಾಟರ್‌ಗಳು ಯಶಸ್ವಿಯಾಗಿದ್ದರು.  

ಅದರಿಂದಾಗಿ ಕೊನೆಯ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಎರಡೂವರೆ ದಶಕಗಳ ನಂತರ ಆಸ್ಟ್ರೇಲಿಯಾ ತಂಡವು  ಪಾಕ್ ಪ್ರವಾಸ ಮಾಡಿದೆ. 

ಪಾಕ್ ತಂಡದ ಮೊಹಮ್ಮದ್ ರಿಜ್ವಾನ್, ಬಾಬರ್, ಅಬ್ದುಲ್ ಶಫೀಕ್ ಅವರು ಉತ್ತಮ ಲಯದಲ್ಲಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಪಿನ್ನರ್ ನೇಥನ್ ಲಯನ್ ಅವರ ಮೇಲೆ ಪಾಕ್ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಹೊಣೆ ಇದೆ. 

ಇಲ್ಲಿಯ ಕ್ರೀಡಾಂಗಣವು ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇರುವುದರಿಂದ  ಆಸ್ಟ್ರೇಲಿಯಾ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು