ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಆಸ್ಟ್ರೇಲಿಯಾ–ಲಂಕಾ ಕದನ ಕುತೂಹಲ

ಆಸ್ಟ್ರೇಲಿಯಾಗೆ ಶ್ರೀಲಂಕಾ ಸವಾಲು; ಸ್ಪಿನ್ನರ್ ಮಹೀಶ್‌ ತೀಕ್ಷಣ ಗಾಯದಿಂದ ಗುಣಮುಖ
Last Updated 27 ಅಕ್ಟೋಬರ್ 2021, 12:57 IST
ಅಕ್ಷರ ಗಾತ್ರ

ದುಬೈ: ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಗುಂಪು ಒಂದರ ಸೂಪರ್‌ 12 ಹಂತದ ಪಂದ್ಯದಲ್ಲಿಆಸ್ಟ್ರೇಲಿಯಾ ಗೆಲುವಿನ ಲಯ ಮುಂದುವರಿಸುವ ಹಂಬಲದಲ್ಲಿದೆ.

ಮೊದಲ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿರುವ ಈ ಎರಡು ತಂಡಗಳು ಗುರುವಾರ ಮುಖಾಮುಖಿಯಾಗಲಿದ್ದು ಕುತೂಹಲ ಮೂಡಿಸಿದೆ.

ಎ ಗುಂಪಿನ ಮೂರೂ ಪಂದ್ಯಗಳಲ್ಲಿ ಜಯ ಗಳಿಸಿರುವ ಶ್ರೀಲಂಕಾ ಗುಂಪು ಒಂದರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲಿನ ಮೊತ್ತ ಬೆನ್ನತ್ತಿ ಜಯ ಗಳಿಸಿತ್ತು. ದಕ್ಷಿಣ ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಗೆದ್ದಿತ್ತು.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾಗಿದ್ದರು. ನಾಯಕ ಆ್ಯರನ್ ಫಿಂಚ್ ಕೂಡ ಬೇಗ ಔಟಾಗಿದ್ದರು. ಸ್ಟೀವ್ ಸ್ಮಿತ್ ಲಯಕ್ಕೆ ಮರಳಿರುವುದು ತಂಡದಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಗಾಯದ ಸಮಸ್ಯೆಯಿಂದಾಗಿ ಹಿಂದಿನ ಪಂದ್ಯದಲ್ಲಿ ಆಡದೇ ಇದ್ದ ಶ್ರೀಲಂಕಾದ ಸ್ಪಿನ್ನರ್ ಮಹೀಶ್‌ ತೀಕ್ಷಣ ಈ ಪಂದ್ಯಕ್ಕೆ ಲಭ್ಯವಿದ್ದಾರೆ. ಇದು ತಂಡದಲ್ಲಿ ಭರವಸೆ ತಂದಿದೆ. ಲೆಗ್ ಸ್ಪಿನ್ನರ್ ಆಲ್‌ರೌಂಡರ್ ವಾನಿಂದು ಹಸರಂಗ ಅವರ ಮೇಲೆಯೂ ತಂಡ ನಿರೀಕ್ಷೆ ಇದೆ.

ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ದಕ್ಷಿಣ ಆಫ್ರಿಕಾ ಎದುರು ಎರಡು ವಿಕೆಟ್ ಗಳಿಸಿದ್ದು ಮಿಷೆಲ್ ಸ್ಟಾರ್ಕ್ ಒಳಗೊಂಡ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಚರಿತ್ ಅಸಲಂಕ, ಪಥುಮ್ ನಿಸಾಂಕ ಮತ್ತು ಆವಿಷ್ಕಾ ಫರ್ನಾಂಡೊ ಅವರನ್ನು ಒಳಗೊಂಡ ಲಂಕಾ ಬ್ಯಾಟಿಂಗ್ ವಿಭಾಗಕ್ಕೆ ಹ್ಯಾಜಲ್‌ವುಡ್ ಮತ್ತು ಸ್ಟಾರ್ಕ್ ಸವಾಲಾಗಬಲ್ಲರು.

ಆರಂಭ:ರಾತ್ರಿ7.30ನೇರಪ್ರಸಾರ:ಸ್ಟಾರ್ಸ್ಪೋರ್ಟ್ಸ್

ಟ್ವೆಂಟಿ–20 ರ‍್ಯಾಂಕಿಂಗ್‌

ಆಸ್ಟ್ರೇಲಿಯಾ 6

ಶ್ರೀಲಂಕಾ 9

ವಿಶ್ವಕಪ್‌ನಲ್ಲಿ ಬಲಾಬಲ

ತಂಡ;ಪಂದ್ಯ;ಜಯ;ಸೋಲು;ಟೈ

ಆಸ್ಟ್ರೇಲಿಯಾ;30;17;13;–

ಶ್ರೀಲಂಕಾ;39;26;12;1

ಟ್ವೆಂಟಿ–20ಯಲ್ಲಿ ಮುಖಾಮುಖಿ

ಪಂದ್ಯಗಳು 16

ಆಸ್ಟ್ರೇಲಿಯಾ ಜಯ 8

ಶ್ರೀಲಂಕಾ ಗೆಲುವು 8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT