ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 253 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.

254 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಬ್ಯಾಟಿಂಗ್ ಬಂದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕ್ರೀಸ್ಗೆ ಅಂಟಿಕೊಳ್ಳಲು ಆಗಷ್ಟೇ ಆರಂಭವಾಗಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಅವರು ಬೌಲಿಂಗ್ನಲ್ಲಿ ಅವರು ಹೊಡೆದ ಶಾಟ್ ಎಡ್ಜ್ ಆಗಿ ಬೌಂಡರಿಯತ್ತ ಸಾಗುತ್ತದೆ.

ಆದರೆ, ಕವರ್ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಅಕ್ಷರ್ ಪಟೇಲ್ ಅವರು ಬರೋಬ್ಬರಿ 24 ಮೀಟರ್ ಹಿಂದಕ್ಕೆ ಹೋಗಿ ಅದ್ಭುತವಾಗಿ ಕ್ಯಾಚ್ ಹಿಡಿಯುತ್ತಾರೆ. ಸದ್ಯ, ಅಕ್ಷರ್ ಪಟೇಲ್ ಹಿಡಿದ ಈ ಕ್ಯಾಚ್ 1983ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಕಪಿಲ್ ದೇವ್ ಹಿಡಿದ ಕ್ಯಾಚ್ ಅನ್ನು ನೆನಪಿಸುತ್ತಿದೆ.

1983ರಲ್ಲಿ ಆಗಿದ್ದೇನು?

ವೆಸ್ಟ್ ಇಂಡೀಸ್ ತಂಡದ ನಾಯಕ ವಿವಿಯನ್ ರಿಚರ್ಡ್ಸ್ ಅಮೋಘವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಅವರು ಬಾಲ್ ಅನ್ನು ಬೌಂಡರಿಯತ್ತ ಬಾರಿಸುತ್ತಾರೆ. ಆದರೆ, ಗಾಳಿಯಲ್ಲಿದ್ದ ಬಾಲ್ ಅನ್ನು ಸುಮಾರು 20 ಮೀಟರ್ ದೂರ ಹಿಂದಕ್ಕೆ ಓಡಿದ ಕಪಿಲ್ ದೇವ್ ಅವರು ಕ್ಯಾಚ್ ಹಿಡಿದಿದ್ದರು. ಆ ಒಂದು ಕ್ಯಾಚ್, ಅಂದು ಭಾರತ ಪಂದ್ಯ ಗೆಲ್ಲಲು ನೆರವಾಗಿತ್ತು.

ಇಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅಂತಹದ್ದೇ ಕ್ಯಾಚ್ ಹಿಡಿದು ಭಾರತದ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.