ಅಜರ್‌, ಆಜಾದ್‌ಗೆ ಶಕತದ ಸಂಭ್ರಮ: ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಮುನ್ನಡೆ

7

ಅಜರ್‌, ಆಜಾದ್‌ಗೆ ಶಕತದ ಸಂಭ್ರಮ: ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಮುನ್ನಡೆ

Published:
Updated:
Deccan Herald

ಅಬುಧಾಬಿ: ಅಜರ್ ಅಲಿ (134; 297 ಎಸೆತ, 12ಬೌಂಡರಿ) ಮತ್ತು ಆಜಾದ್ ಶಫೀಕ್‌ (104; 259 ಎಸೆತ, 14 ಬೌಂಡರಿ) ಅವರ ಅಮೋಘ ಆಟದ ನೆರವಿನಿಂದ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಮುನ್ನಡೆ ಸಾಧಿಸಿದೆ.

ಮೂರನೇ ಪಂದ್ಯದ ಮೂರನೇ ದಿನದಾಟದಲ್ಲಿ ಅಜರ್ ಮತ್ತು ಆಜಾದ್ ಅವರ ಶತಕವು ಪಾಕಿಸ್ತಾನದ ಮುನ್ನಡೆಗೆ ಕಾರಣವಾಯಿತು. ಮೊದಲ ಇನಿಂಗ್ಸ್‌ನಲ್ಲಿ 74 ರನ್‌ಗಳ ಹಿನ್ನಡೆ ಅನುಭವಿಸಿದ ನ್ಯೂಜಿಲೆಂಡ್‌ ಎರಡನೇ ಇನಿಂಗ್ಸ್‌ನ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಬುಧವಾರ ದಿನದಾಟದ ಅಂತ್ಯಕ್ಕೆ 26 ರನ್‌ ಗಳಿಸಿದ್ದು ಒಟ್ಟಾರೆ 48 ರನ್‌ಗಳಿಂದ ಹಿಂದೆ ಉಳಿದಿದೆ.

85 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದಾಗ ಜೊತೆಗೂಡಿದ ಆಜಾದ್ ಮತ್ತು ಅಜರ್‌ ನಾಲ್ಕನೇ ವಿಕೆಟ್‌ಗೆ 201 ರನ್ ಸೇರಿಸಿದರು. 18 ರನ್‌ಗಳ ಅಂತರದಲ್ಲಿ ಇಬ್ಬರೂ ಔಟಾದರು. ಚೊಚ್ಚಲ ಪಂದ್ಯ ಆಡಿದ ವಿಲಿಯಂ ಸೋಮರ್‌ವಿಲ್ಲೆ ಎಸೆತದಲ್ಲಿ ಅಜಾಜ್‌ ಪಟೇಲ್‌ಗೆ ಕ್ಯಾಚ್ ನೀಡಿ ಅಜರ್ ಔಟಾದರು. ಅಜಾಜ್‌ ಪಟೇಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿ ಶಫೀಕ್‌ ವಿಕೆಟ್ ಕಳೆದುಕೊಂಡರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ನ್ಯೂಜಿಲೆಂಡ್‌: 274; ಪಾಕಿಸ್ತಾನ (ಮಂಗಳವಾರದ ಅಂತ್ಯಕ್ಕೆ 3ಕ್ಕೆ 139): 135 ಓವರ್‌ಗಳಲ್ಲಿ 348 (ಅಜರ್‌ ಅಲಿ 134, ಹ್ಯಾರಿಸ್‌ ಸೊಹೇಲ್‌ 34, ಆಜಾದ್ ಶಫೀಕ್‌ 104, ಸರ್ಫರಾಜ್‌ ಅಹಮ್ಮದ್‌ 25; ಟಿಮ್ ಸೌಥಿ 56ಕ್ಕೆ1, ಟ್ರೆಂಟ್ ಬೌಲ್ಟ್‌ 66ಕ್ಕೆ2, ಎಜಾಜ್‌ ಪಟೇಲ್‌ 100ಕ್ಕೆ2, ವಿಲಿಯಂ ಸೋಮರ್‌ವಿಲ್ಲೆ 75ಕ್ಕೆ4); ಎರಡನೇ ಇನಿಂಗ್ಸ್‌, ನ್ಯೂಜಿಲೆಂಡ್‌: 14 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 26 (ಕೇನ್ ವಿಲಿಯಮ್ಸನ್‌ ಬ್ಯಾಟಿಂಗ್‌ 14, ಸೋಮರ್‌ವಿಲ್ಲೆ ಬ್ಯಾಟಿಂಗ್‌ 1; ಶಾಹೀನ್‌ 11ಕ್ಕೆ1, ಯಾಸಿರ್‌ 5ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !