ವಿರಾಟ್‌ ಬ್ಯಾಟಿಂಗ್‌ ನನಗೆ ಮಾದರಿ: ಬಾಬರ್‌ ಆಜಂ

ಗುರುವಾರ , ಜೂನ್ 20, 2019
27 °C

ವಿರಾಟ್‌ ಬ್ಯಾಟಿಂಗ್‌ ನನಗೆ ಮಾದರಿ: ಬಾಬರ್‌ ಆಜಂ

Published:
Updated:

ಮ್ಯಾಂಚೆಸ್ಟರ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಮಾದರಿಯಾಗಿಟ್ಟುಕೊಂಡಿದ್ದೇನೆ ಎಂದು ಪಾಕಿಸ್ತಾನ ಪ್ರತಿಭಾವಂತ ಆಟಗಾರ ಬಾಬರ್ ಆಜಂ ಬಹಿರಂಗಪಡಿಸಿದ್ದಾರೆ. 

ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್‌ ಎನಿಸಿರುವ ಕೊಹ್ಲಿ ಅವರ ಆಟದ ವಿಡಿಯೊಗಳನ್ನು ನೋಡಿ ಬಾಬರ್‌ ತಮ್ಮ ಆಟವನ್ನು ಮೊನಚುಗೊಳಿಸುತ್ತಿದ್ದಾರೆ. ದಾಯಾದಿಗಳ ಬಹುನಿರೀಕ್ಷಿತ ಸಮರಕ್ಕೆ ಎರಡು ದಿನಗಳಷ್ಟೇ ಇವೆ. ಮೈದಾನದ ಹೊರಗೂ ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಇಂಥ ಸಂದರ್ಭದಲ್ಲೇ ಆಜಂ ಮುಕ್ತವಾಗಿ ಈ ಹೇಳಿಕೆ ನೀಡಿದ್ದಾರೆ.

ಭಾರತ ವಿರುದ್ಧ ಪಂದ್ಯದಲ್ಲಿ ಪಾಕ್‌ ತಂಡ ಬಾಬರ್‌ ಅವರಿಂದ ಉತ್ತಮ ಆಟ ನಿರೀಕ್ಷಿಸುತ್ತಿದೆ. ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್‌ಗೆ 348 ರನ್‌ ಹೊಡೆದಿತ್ತು. ಬಾಬರ್‌ ಆ ಪಂದ್ಯದಲ್ಲಿ ಸೊಗಸಾದ 63 ರನ್‌ಗಳ ಇನಿಂಗ್ಸ್‌ ಕಟ್ಟಿದ್ದರು. ಪಾಕ್‌ ಆ ಪಂದ್ಯದಲ್ಲಿ ಜಯಗಳಿಸಿತ್ತು.

‘ನಾನು ವಿರಾಟ್‌ ಅವರ ಬ್ಯಾಟಿಂಗ್, ವಿಭಿನ್ನ ಪರಿಸ್ಥಿತಿಗೆ ಅನುಗುಣವಾಗಿ ಆಡುವುದನ್ನು ನೋಡುತ್ತಿದ್ದೇನೆ. ಅವುಗಳಿಂದ ಕಲಿಯಲು ಯತ್ನಿಸುತ್ತಿದ್ದೇನೆ’ ಎಂದು 24 ವರ್ಷದ ಬಾಬರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !