ಸೋಮವಾರ, ಜೂನ್ 1, 2020
27 °C

ಕೊಹ್ಲಿ ಜೊತೆ ಬಾಬರ್‌ ಹೋಲಿಕೆಗೆ ಕಾಲವಲ್ಲ: ಯೂನಿಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ : ‘ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಜೊತೆ ಪಾಕ್‌ ತಂಡದ ಬಾಬರ್‌ ಅಜಂ ಹೋಲಿಕೆಗೆ ಇದು ಕಾಲವಲ್ಲ’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಯೂನಿಸ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ. ‘ಕೊಹ್ಲಿ ಎಲ್ಲ ಹಂತದಲ್ಲೂ ತಾನೊಬ್ಬ ಶ್ರೇಷ್ಠ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಬಾಬರ್‌ ಅವರು ಈ ಹಂತ ತಲುಪಲು ಇನ್ನಷ್ಟು ವರ್ಷ ಕಾಯಬೇಕು’ ಎಂದು ಯೂನಿಸ್‌ ಹೇಳಿದ್ದಾರೆ.

‘ಭಾರತ ತಂಡದ ನಾಯಕ, ಬಾಬರ್‌ಗಿಂತ ಹೆಚ್ಚು ಅನುಭವ ಉಳ್ಳವರು. ಪ್ರತಿ ಹಂತದಲ್ಲೂ ತಮ್ಮನ್ನು ಉತ್ತಮ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ 70 ಶತಕಗಳನ್ನು ಬಾರಿಸಿರುವುದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಬಹುತೇಕ ಎಲ್ಲ ತಂಡಗಳ ಎದುರು ಅವರು ಮಿಂಚಿದ್ದಾರೆ’ ಎಂದು ಟೆಸ್ಟ್ ಮಾದರಿಯಲ್ಲಿ ಪಾಕ್‌ ಪರ ಗರಿಷ್ಠ ರನ್‌ ಗಳಿಸಿರುವ ಯೂನಿಸ್‌ ನುಡಿದರು.

‘ಬಾಬರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಐದು ವರ್ಷ ಆಗಿರಬಹುದು. ಎಲ್ಲ ಮಾದರಿ ಕ್ರಿಕೆಟ್‌ನಲ್ಲೂ ಉತ್ತಮ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದಾರೆ’ ಎಂದೂ ಅವರು ಹೇಳಿದರು.

31 ವರ್ಷದ ಕೊಹ್ಲಿ, ಮೂರು ಮಾದರಿಯ ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು