ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೂನಿಯರ್ ಕ್ರಿಕೆಟ್‌ನಲ್ಲಿ ಬೌನ್ಸರ್ ಬೇಡ’

Last Updated 25 ಜನವರಿ 2021, 15:53 IST
ಅಕ್ಷರ ಗಾತ್ರ

ಬೆಂಗಳೂರು: ತಲೆಗೆ ಪೆಟ್ಟುಬೀಳುವುದನ್ನು ತಡೆಯಲು ಜೂನಿಯರ್ ಕ್ರಿಕೆಟ್‌ನಲ್ಲಿ ಬೌನ್ಸರ್ ಎಸೆತಗಳನ್ನು ನಿಷೇಧಿಸಬೇಕು ಎಂದು ಕಂಕಷನ್ ತಜ್ಞ, ಅಂತರರಾಷ್ಟ್ರೀಯ ಕಂಕಷನ್ ಮತ್ತು ಹೆಡ್ ಇಂಜುರಿ ರೀಸರ್ಚ್ ಫೌಂಡೇಷನ್‌ನ ವೈದ್ಯಕೀಯ ನಿರ್ದೇಶಕ ಮೈಕಲ್ ಟರ್ನರ್ ಆಗ್ರಹಿಸಿದ್ದಾರೆ.

2014ರಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಫಿಲಿಪ್ ಹ್ಯೂಗ್ಸ್ ಬೌನ್ಸರ್‌ನಿಂದಾಗಿ ತಲೆಗೆ ‍ಪೆಟ್ಟು ಬಿದ್ದು ಸಾವಿಗೀಡಾಗಿದ್ದರು. ಇದರ ನಂತರ ಆಟಗಾರರ ಸುರಕ್ಷತೆಯ ಕುರಿತು ಚರ್ಚೆಗಳು ನಡೆಯತೊಡಗಿವೆ. ಬ್ಯಾಟ್ಸ್‌ಮನ್‌ಗಳ ತಲೆಯತ್ತ ನುಗ್ಗಿಬರುವ ಬೌನ್ಸರ್ ಅಥವಾ ಶಾರ್ಟ್‌ ಬಾಲ್‌ಗಳಿಗೆ ಸಂಬಂಧಿಸಿ ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆಯೇ ಎಂಬುದರ ಕುರಿತು ಕ್ರಿಕೆಟ್ ವಲಯದಲ್ಲಿ ಈಗ ಜಿಜ್ಞಾಸೆ ಶುರುವಾಗಿದೆ.

‘ಹದಿಹರಯದಲ್ಲಿ ಮೆದುಳು ಬೆಳೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕಾದದ್ದು ಅತ್ಯಗತ್ಯ. ಕಂಕಷನ್ ತಡೆಗಟ್ಟಲು ಶಾರ್ಟ್ ಬಾಲ್ ಎಸೆತಗಳನ್ನು ನಿಷೇಧಿಸುವುದಾದರೆ ಅದೊಂದು ಮಹತ್ವದ ಹೆಜ್ಜೆ ಆಗಲಿದೆ. ತಲೆಬುರುಡೆಯನ್ನು ಗಾಯದಿಂದ ರಕ್ಷಿಸುವ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿವೆ. ಆದರೂ ನಿಯಮಗಳನ್ನು ಬದಲಿಸಿ ಅ‍ಪಾಯವನ್ನು ತಡೆಗಟ್ಟುವುದು ಉತ್ತಮ ಕಾರ್ಯ’ ಎಂದು ಟರ್ನರ್ ಅಭಿಪ್ರಾಯಪಟ್ಟರು.

ಕಂಕಷನ್‌ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕೆಲವು ಮಾಜಿ ರಗ್ಬಿ ಆಟಗಾರರು ತಲೆಗೆ ಗಾಯ ಆಗುವುದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಎಲ್ಲದಕ್ಕೂ ಕಾರಣ ಎಂದು ಹೇಳಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ನ ಫುಟ್‌ಬಾಲ್ ಆಟಗಾರ ನೋಬಿ ಸ್ಟಿಲ್ಸ್‌ ಸಾವಿಗೀಡಾದ ನಂತರ ಎಚ್ಚೆತ್ತುಕೊಂಡ ಪ್ರೀಮಿಯರ್ ಲೀಗ್‌ ತಂಡಗಳ ಮ್ಯಾನೇಜರ್‌ಗಳು ಅಭ್ಯಾಸದ ವೇಳೆ ಚೆಂಡನ್ನು ಹೆಡ್ ಮಾಡುವುದನ್ನು ಆದಷ್ಟೂ ತಪ್ಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT