ಶುಕ್ರವಾರ, ಸೆಪ್ಟೆಂಬರ್ 20, 2019
21 °C

ತ್ರಿಕೋನ ಸರಣಿಗೆ ಬಾಂಗ್ಲಾದೇಶ ಟ್ವೆಂಟಿ–20 ತಂಡ: ಮೆಹಿದಿ, ರುಬೆಲ್‌ಗೆ ಸ್ಥಾನವಿಲ್ಲ

Published:
Updated:
Prajavani

ಢಾಕಾ: ಬಾಂಗ್ಲಾದೇಶ ಟ್ವೆಂಟಿ–20 ತಂಡದಿಂದ ಮೆಹಿದಿ ಹಸನ್‌ ಹಾಗೂ ವೇಗಿ ರುಬೆಲ್‌ ಹುಸೇನ್‌ ಅವರನ್ನು ಕೈಬಿಡಲಾಗಿದೆ. ಅಫ್ಗಾನಿಸ್ತಾನ ಮತ್ತು ಜಿಂಬಾಬ್ವೆ ತಂಡಗಳ ವಿರುದ್ಧ ನಡೆಯಲಿರುವ ತ್ರಿಕೋನ ಸರಣಿಗೆ ಮಂಗಳವಾರ ತಂಡವನ್ನು ಪ್ರಕಟಿಸಲಾಗಿದೆ. ಶಕೀಬ್‌ ಅಲ್‌ ಹಸನ್‌ ತಂಡದ ನಾಯಕರಾಗಿದ್ದಾರೆ.

ಆಲ್‌ರೌಂಡರ್‌ ಆರೀಫ್‌ ಉಲ್‌ ಹಕ್‌, ವೇಗಿ ಅಬು ಹೈದರ್‌, ಸ್ಪಿನ್ನರ್‌ ನಜ್ಮುಲ್‌ ಇಸ್ಲಾಂ ಮತ್ತು ಬ್ಯಾಟ್ಸಮನ್‌ ಮೊಹಮ್ಮದ್‌ ಮಿಥುನ್‌ ಅವರನ್ನೂ ಆಯ್ಕೆಗೆ ಪರಿಗಣಿಸಿಲ್ಲ. ಆರಂಭಿಕ ಬ್ಯಾಟ್ಸಮನ್‌ ತಮಿಮ್‌ ಇಕ್ಬಾಲ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಾಮ ಬಯಸಿದ್ದು ಅವರನ್ನೂ ತಂಡದಲ್ಲಿ ಸೇರಿಸಿಲ್ಲ. 

ಯುವ ವೇಗಿ ಯಾಸೀನ್‌ ಅರಾಫತ್‌, ಎಡಗೈ ಸ್ಪಿನ್ನರ್ ತೈಜುಲ್‌ ಇಸ್ಲಾಂ ಅವರಿಗೆ ಮೊದಲ ಬಾರಿ 1 ಟ್ವೆಂಟಿ–20 ತಂಡಕ್ಕೆ ಕರೆ ನೀಡಲಾಗಿದೆ.

ತಂಡ ಇಂತಿದೆ: ಶಕೀಬ್‌ ಅಲ್ ಹಸನ್‌ (ನಾಯಕ), ಲಿಟನ್‌ ದಾಸ್‌, ಸೌಮ್ಯ ಸರ್ಕಾರ್, ಮುಶ್ಫೀಕುರ್‌ ರಹೀಮ್‌, ಮಹಮ್ಮದುಲ್ಲಾ ರಿಯಾದ್‌,ಅಫೀಫ್‌ ಹುಸೇನ್‌, ಮೊಸಾದೆಕ್‌ ಹುಸೇನ್‌, ಶಬ್ಬೀರ್‌ ರೆಹಮಾನ್‌, ತೈಜುಲ್‌ ಇಸ್ಲಾಂ, ಮಹೇದಿ ಹಸನ್‌, ಮೊಹಮ್ಮದ್‌ ಸೈಫುದ್ದೀನ್‌, ಮುಸ್ತಾಫಿಜರ್‌ ರೆಹಮಾನ್‌, ಯಾಸೀನ್‌ ಅರಾಫತ್‌.

Post Comments (+)