ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಮಿನಲ್‌ ಹಕ್‌ ಶತಕದ ಸೊಬಗು

ವಿಂಡೀಸ್‌ ಎದುರಿನ ಮೊದಲ ಟೆಸ್ಟ್‌: ಬಾಂಗ್ಲಾ ಉತ್ತಮ ಮೊತ್ತ
Last Updated 22 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಚಿತ್ತಗಾಂಗ್‌, ಬಾಂಗ್ಲಾದೇಶ: ಮೊಮಿನಲ್‌ ಹಕ್‌ (120; 167ಎ, 10ಬೌಂ, 1ಸಿ) ಅಮೋಘ ಬ್ಯಾಟಿಂಗ್‌ ಮೂಲಕ ಗುರುವಾರ ಜಹುರ್‌ ಅಹ್ಮದ್‌ ಚೌಧರಿ ಕ್ರೀಡಾಂಗಣದಲ್ಲಿ ಸೇರಿದ್ದ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಅವರ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ.

ಶಕೀಬ್‌ ಅಲ್‌ ಹಸನ್‌ ಬಳಗ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 8 ವಿಕೆಟ್‌ಗೆ 315ರನ್‌ ಗಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ತಂಡಕ್ಕೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ಕೆಮರ್‌ ರೋಚ್‌ ಹಾಕಿದ ಮೂರನೇ ಎಸೆತದಲ್ಲಿ ಸೌಮ್ಯ ಸರ್ಕಾರ್‌ (0) ವಿಕೆಟ್‌ ನೀಡಿದರು.

ನಂತರ ಇಮ್ರುಲ್‌ ಕಯಾಸ್‌ (44; 87ಎ, 5ಬೌಂ) ಮತ್ತು ಮೊಮಿನಲ್‌ ಅಮೋಘ ಜೊತೆಯಾಟವಾಡಿದರು. ಇವರು ಎರಡನೇ ವಿಕೆಟ್‌ಗೆ 104ರನ್‌ ಸೇರಿಸಿದರು. 27ನೇ ಓವರ್‌ನಲ್ಲಿ ಕಯಾಸ್‌ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಬಳಿಕ ಮೊಮಿನಲ್‌, ಮೊಹಮ್ಮದ್‌ ಮಿಥುನ್‌ (20;50ಎ, 2ಬೌಂ) ಮತ್ತು ನಾಯಕ ಶಕೀಬ್‌ (34; 68ಎ, 2ಬೌಂ) ಜೊತೆಗೂಡಿ ತಂಡದ ಮೊತ್ತ ಹೆಚ್ಚಿಸಿದರು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮೆಹದಿ ಹಸನ್‌ (22; 31ಎ, 3ಬೌಂ), ನಯೀಮ್‌ ಹಸನ್‌ (ಬ್ಯಾಟಿಂಗ್‌ 24; 60ಎ, 2ಬೌಂ) ಹಾಗೂ ತೈಜುಲ್‌ ಇಸ್ಲಾಂ (ಬ್ಯಾಟಿಂಗ್‌ 32; 57ಎ, 3ಬೌಂ, 1ಸಿ) ಜವಾಬ್ದಾರಿಯುತ ಆಟ ಆಡಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ: ಮೊದಲ ಇನಿಂಗ್ಸ್‌: 88 ಓವರ್‌ಗಳಲ್ಲಿ 8 ವಿಕೆಟ್‌ಗೆ 315 (ಇಮ್ರುಲ್‌ ಕಯಾಸ್‌ 44, ಮೊಮಿನಲ್‌ ಹಕ್‌ 120, ಮೊಹಮ್ಮದ್‌ ಮಿಥುನ್‌ 20, ಶಕೀಬ್‌ ಅಲ್‌ ಹಸನ್‌ 34, ಮೆಹದಿ ಹಸನ್‌ 22, ನಯೀಮ್‌ ಹಸನ್‌ ಬ್ಯಾಟಿಂಗ್‌ 24, ತೈಜುಲ್‌ ಇಸ್ಲಾಂ ಬ್ಯಾಟಿಂಗ್‌ 32; ಕೆಮರ್‌ ರೋಚ್‌ 55ಕ್ಕೆ1, ಶಾನನ್‌ ಗೇಬ್ರಿಯಲ್‌ 69ಕ್ಕೆ4, ಜೊಮೆಲ್‌ ವಾರಿಕನ್‌ 62ಕ್ಕೆ2, ದೇವೇಂದ್ರ ಬಿಷೂ 60ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT