ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಬಾಂಗ್ಲಾದೇಶ ಕ್ಲೀನ್‌ಸ್ವೀಪ್ ಸಾಧನೆ

Last Updated 14 ಮಾರ್ಚ್ 2023, 19:11 IST
ಅಕ್ಷರ ಗಾತ್ರ

ಢಾಕಾ: ಆರಂಭಿಕ ಬ್ಯಾಟರ್ ಲಿಟನ್ ದಾಸ್ ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಬಾಂಗ್ಲಾದೇಶ ತಂಡವು ಇಂಗ್ಲೆಂಡ್ ಎದುರಿನ ಮೂರನೇ ಪಂದ್ಯವನ್ನು 16 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು. ‌

ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟಿ20 ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಜಯಿಸಿತು. ಅದರೊಂದಿಗೆ ಸರಣಿಯನ್ನು 3–0ಯಿಂದ ಜಯಭೇರಿ ಬಾರಿಸಿತು.

ಆರಂಭಿಕ ಬ್ಯಾಟರ್ ಲಿಟನ್ ದಾಸ್ (73; 57ಎ, 4X10, 6X1) ಮತ್ತ ಉ ರೋನಿ ತಾಲೂಕದಾರ್ ಮೊದಲ ವಿಕೆಟ್‌ಗ 55 ರನ್ ಗಳಿಸಿ ಉತ್ತಮ ಆರಂಭ ನೀಡಿದರು.ಶಾಂತೋ (ಔಟಾಗದೆ 47, 36ಎ) ಅವರು ಕೂಡ ಉತ್ತಮ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ:
20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 158 (ಲಿಟನ್ ದಾಸ್ 73, ರೋನಿ ತಾಲೂಕದಾರ್ 24, ಶಾಂತೊ ಔಟಾಗದೆ 47,ಆದಿಲ್ ರಶೀದ್ 23ಕ್ಕೆ1, ಕ್ರಿಸ್ ಜೋರ್ಡಾನ್ 21ಕ್ಕೆ1)

ಇಂಗ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 142 (ಡೇವಿಡ್ ಮಲಾನ್ 53, ಜಾಸ್ ಬಟ್ಲರ್ 40, ಕ್ರಿಸ್ ವೋಕ್ಸ್ 13,ತಸ್ಕಿನ್ ಅಹಮದ್ 26ಕ್ಕೆ2)

ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT