ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಟೆಸ್ಟ್ ತಂಡದ ನಾಯಕ ಮೋಮಿನುಲ್‌ ಹಕ್‌ಗೆ ಕೋವಿಡ್‌

Last Updated 10 ನವೆಂಬರ್ 2020, 12:57 IST
ಅಕ್ಷರ ಗಾತ್ರ

ಢಾಕಾ : ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕ ಮೋಮಿನುಲ್‌ ಹಕ್‌ ಅವರಲ್ಲಿ ಕೋವಿಡ್‌ ಇರುವುದು ದೃಢಪಟ್ಟಿದೆ. ಸದ್ಯ ಅವರು ಪ್ರತ್ಯೇಕವಾಸದಲ್ಲಿದ್ದಾರೆ ಎಂದು ವರದಿಯಾಗಿದೆ.

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ (ಬಿಸಿಬಿ) ಮುಖ್ಯ ಫಿಜಿಷಿಯನ್‌ ದೇಬಶೀಸ್‌ ಚೌಧರಿ ಅವರು ಹಕ್‌ ಅವರಿಗೆ ಸೋಂಕು ತಗಲಿರುವುದನ್ನು ಖಚಿತಪಡಿಸಿದ್ದಾರೆ.

ಇತ್ತೀಚೆಗೆ ಬಾಂಗ್ಲಾದ ಅನುಭವಿ ಆಟಗಾರ ಮೆಹಮುದುಲ್ಲಾ ರಿಯಾದ್‌ ಅವರಲ್ಲಿಯೂ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇದರಿಂದಾಗಿ ಅವರು ಪಾಕಿಸ್ತಾನ ಸೂಪರ್ ಲೀಗ್‌ನ (ಪಿಎಸ್‌ಎಲ್‌) ಪ್ಲೇ ಆಫ್‌ ಪಂದ್ಯಗಳಿಂದ ದೂರ ಉಳಿದಿದ್ದರು.

‘ನನಗೆ ಕೊರೊನಾ ಸೋಂಕು ತಗಲಿರುವುದು ನಿನ್ನೆ (ಸೋಮವಾರ) ತಿಳಿದುಬಂತು. ಎರಡು ದಿನಗಳಿಂದ ಜ್ವರ ಇತ್ತು. ಈಗಲೂ ಜ್ವರದ ಲಕ್ಷಣಗಳಿವೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳಿಲ್ಲ‘ ಎಂದು ಹಕ್‌ ಹೇಳಿದ್ದಾರೆ.

ಹಕ್‌ ಅವರು ಈ ತಿಂಗಳು ನಡೆಯಲಿರುವ ಬಂಗಬಂಧು ಟ್ವೆಂಟಿ–20 ಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಬಾಂಗ್ಲಾದ ಮಷ್ರಫೆ ಮೊರ್ತಜಾ, ಅಬು ಜಯೇದ್‌ ಹಾಗೂ ಸೈಫ್ ಹಸನ್‌ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT