ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ತಂಡದ ಶ್ರೀಲಂಕಾ ಪ್ರವಾಸ ಮುಂದೂಡಿಕೆ

Last Updated 24 ಜೂನ್ 2020, 13:38 IST
ಅಕ್ಷರ ಗಾತ್ರ

ದುಬೈ: ಬಾಂಗ್ಲಾ ಕ್ರಿಕೆಟ್‌ ತಂಡ ಜುಲೈನಲ್ಲಿ ಕೈಗೊಳ್ಳಬೇಕಿದ್ದ ಶ್ರೀಲಂಕಾಪ್ರವಾಸವು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬುಧವಾರ ಮುಂದೂಡಿಕೆಯಾಗಿದೆ. ಈ ವಿಷಯವನ್ನು ಐಸಿಸಿ ತನ್ನ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಬಾಂಗ್ಲಾ ತಂಡವು ದ್ವೀಪರಾಷ್ಟ್ರಕ್ಕೆ ತೆರಳಬೇಕಿತ್ತು.

‘ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಮ್ಮ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ ಸರಣಿಗೆ ಇನ್ನೂ ಸಜ್ಜುಗೊಂಡಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಹೇಳಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ (ಎಸ್‌ಎಲ್‌ಸಿ) ತಿಳಿಸಿದೆ.

‘ಸರಣಿಯು ನಿಗದಿತ ಸಮಯಕ್ಕೆ ನಡೆಯುತ್ತಿಲ್ಲ. ಎರಡೂ ಮಂಡಳಿಗಳು ಪರಸ್ಪರ ಚರ್ಚಿಸಿ ಮುಂದಿನ ವೇಳಾಪಟ್ಟಿ ಪ್ರಕಟಿಸುತ್ತೇವೆ’ ಎಂದು ಬಿಸಿಬಿ ಹಾಗೂ ಎಸ್‌ಎಲ್‌ಸಿ ಹೇಳಿವೆ.

ನ್ಯೂಜಿಲೆಂಡ್‌ ತಂಡ ಕೈಗೊಳ್ಳಬೇಕಿದ್ದ ಬಾಂಗ್ಲಾದೇಶದ ಪ್ರವಾಸವೂ ಕೋವಿಡ್‌ ಭೀತಿಯ ಕಾರಣಕ್ಕೆ ಮಂಗಳವಾರ ಮುಂದೂಡಿಕೆಯಾಗಿತ್ತು. ಬಾಂಗ್ಲಾದೇಶ ತಂಡದ ಮೂವರು ಆಟಗಾರರಲ್ಲಿ ಇತ್ತೀಚೆಗೆ ಸೋಂಕು ದೃಢಪಟ್ಟಿತ್ತು. ಐಸಿಸಿ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವಾಗಿ ಕಿವೀಸ್‌ ತಂಡ ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಬಾಂಗ್ಲಾ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಬೇಕಿತ್ತು.

ಹೋದ ವಾರ ಬಾಂಗ್ಲಾದೇಶದ ಅನುಭವಿ ಆಟಗಾರ ಮಶ್ರಫೆ ಮೊರ್ತಜಾ, ನಜಮುಲ್‌ ಇಸ್ಲಾಮ್‌ ಹಾಗೂ ನಫೀಸ್‌ ಇಕ್ಬಾಲ್‌ ಅವರಲ್ಲಿ ಕೋವಿಡ್‌ ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT