ಗುರುವಾರ , ಫೆಬ್ರವರಿ 2, 2023
27 °C

IND vs BAN 2nd ODI: ಮೆಹದಿ ಹಸನ್ ಶತಕ, ಭಾರತದ ಗೆಲುವಿಗೆ 272 ರನ್ ಗುರಿ 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೀರಪುರ್: ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಸವಾಲಿನ ಮೊತ್ತ ಪೇರಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿದೆ. 

ಆರಂಭಿಕ ಆಟಗಾರರಾದ ಅನಾಮುಲ್ ಹೇಗ್ ಬಿಜಯ್ 7, ಲಿಟನ್ ಕುಮಾರ್ ದಾಸ್ 11 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ನಜ್ಮುಲ್ ಹುಸೇನ್ ಶಾಂತೊ 21, ಶಕೀಬ್ ಅಲ್ ಹಸನ್ 08, ಮುಷ್ಫಿಕುರ್ ರಹೀಮ್ 12 ರನ್ ಗಳಿಸಿ ಹೆಚ್ಚು ಹೊತ್ತು ಆಡಲಿಲ್ಲ. 

ಒಂದು ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಬಾಂಗ್ಲಾ ತಂಡಕ್ಕೆ ಮೆಹಮೂದ್ ಉಲ್ಲಾಹ 77, ಮೆಹದಿ ಹಸನ್ ಮಿರಾಜ್ ಔಟಾಗದೆ 100 ರನ್‌ ಗಳಿಸಿ ಆಸರೆಯಾದರು. 

ಭಾರತದ ಪರ ವಾಷಿಂಗ್ಟನ್ ಸುಂದರ್ 3, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ತಲಾ 3 ವಿಕೆಟ್ ಪಡೆದರು. 

ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ವಿಕೆಟ್ ಅಂತರದ ಸೋಲಿನ ಮುಖಭಂಗಕ್ಕೊಳಗಾಗಿತ್ತು. ಸರಣಿ ಗೆಲ್ಲಲು ಅಂತಿಮ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು