ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕೀಬ್ ಅಲ್ ಹಸನ್‌ಗೆ ಗನ್‌ಮ್ಯಾನ್ ಭದ್ರತೆ

Last Updated 18 ನವೆಂಬರ್ 2020, 15:52 IST
ಅಕ್ಷರ ಗಾತ್ರ

ಢಾಕಾ: ಜೀವ ಬೆದರಿಕೆ ಎದುರಿಸುತ್ತಿರುವ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಭದ್ರತೆಗಾಗಿ ಗನ್‌ಮ್ಯಾನ್ ಒಬ್ಬರನ್ನು ನೇಮಕ ಮಾಡಲಾಗಿದೆ.

ಬುಧವಾರ ಇಲ್ಲಿಯ ಶೇರ್‌ ಎ ಬಾಂಗ್ಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶಕೀಬ್ ಅಭ್ಯಾಸ ನಡೆಸುವಾಗ ಗನ್‌ಮ್ಯಾನ್ ಹಾಜರಿದ್ದರು.

ಶಕೀಬ್ ಅವರು ಈಚೆಗೆ ಕೋಲ್ಕತ್ತದಲ್ಲಿ ನಡೆದಿದ್ದ ಕಾಳಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿದ್ದರು. ’ಹಿಂದೂಧರ್ಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಪ್ಪು‘ ಎಂದು ಯುವಕನೊಬ್ಬ ಶಕೀಬ್‌ಗೆ ಬೆದರಿಕೆ ಒಡ್ಡಿದ್ದ.

ಅದರಿಂದಾಗಿ ಶಕೀಬ್ ತಾವು ಕಾರ್ಯಕ್ರಮ ಉದ್ಘಾಟಿಸಿಲ್ಲ. ಆಹ್ವಾನದ ಮೇರೆಗೆ ಭಾಗವಹಿಸಿದ್ದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದರು. ಬೆದರಿಕೆ ಹಾಕಿದ್ದ 28 ವರ್ಷದ ಮೊಹಸೀನ್ ತಾಲೂಕ್ದಾರ್ ಎಂಬುವನನ್ನು ಪೊಲೀಸರು ಬಂಧಿಸಿದ್ದರು.

’ದೇಶದ ಗೌರವ ಹೆಚ್ಚಿಸಿದ ಆಟಗಾರನಿಗೆ ಬೆದರಿಕೆ ಒಡ್ಡಿರುವುದು ಅಕ್ಷಮ್ಯ. ಆರೋಪಿಗೆ ತಕ್ಕ ಶಿಕ್ಷೆ ನೀಡಲು ಕ್ರಮ ಕೈಗೊಳ್ಳುತ್ತೇವೆ.‘ ಎಂದು ಅಸಾದುಜ್ಜಮಾನ್ ಖಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT