ಬುಧವಾರ, ನವೆಂಬರ್ 13, 2019
18 °C

ಬಿಸಿಸಿಐ ಸಿಎಫ್‌ಒ ಸಂತೋಷ್ ರಾಜೀನಾಮೆ

Published:
Updated:

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ವಿತ್ತ ಅಧಿಕಾರಿ (ಸಿಎಫ್‌ಒ) ಸಂತೋಷ್ ರೆಂಗಣೇಕರ್ ಅವರು ರಾಜೀನಾಮೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಿಒಎಯು ಅವರನ್ನು ನೇಮಕ ಮಾಡಿತ್ತು. ಅವರು ಮಂಡಳಿಯ ಪ್ರಥಮ ಸಿಎಫ್‌ಒ ಆಗಿದ್ದರು. ಶುಕ್ರವಾರ ಅವರು ತಮ್ಮ ರಾಜೀನಾಮೆಯನ್ನು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)