ಗುರುವಾರ ನಡೆಯಲಿರುವ ಬಿಸಿಸಿಐ ಸಭೆ;
ಐಪಿಎಲ್: 10 ತಂಡಗಳು ಸದ್ಯಕ್ಕಿಲ್ಲ?
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಏರಿಸುವ ನಿರ್ಧಾರ ಗುರುವಾರ ನಡೆಯಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಆದರೆ 2022ರಲ್ಲಷ್ಟೇ 10 ತಂಡಗಳು ಕಣಕ್ಕೆ ಇಳಿಯಲಿವೆ.
ಐಪಿಎಲ್‌ನಲ್ಲಿ 10 ಫ್ರಾಂಚೈಸ್‌ಗಳಿಗೆ ಅವಕಾಶ ನೀಡುವುದೇ ಅಹಮ್ಮದಾಬಾದ್ನಲ್ಲಿ ನಡೆಯಲಿರುವ ಸಭೆಯ ಪ್ರಮುಖ ವಿಷಯವಾಗಿದೆ. ಒಂಬತ್ತು ಅಥವಾ 10 ತಂಡಗಳಿಗೆ ಮುಂದಿನ ವರ್ಷ ಅವಕಾಶ ನೀಡಿದರೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಅವಕಾಶ ಸಿಗಲಾರದು. ಆದ್ದರಿಂದ 2022ರಲ್ಲಷ್ಟೇ ಹೊಸ ತಂಡಗಳಿಗೆ ಆಡಲು ಅವಕಾಶ ನೀಡುವುದು ಒಳಿತು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.