ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಆಟಗಾರರ ವಯಸ್ಸು ಪತ್ತೆಗೆ ತಂತ್ರಾಂಶ ಬಳಸಲು ಬಿಸಿಸಿಐ ಸಿದ್ಧತೆ

Last Updated 23 ಜುಲೈ 2022, 16:12 IST
ಅಕ್ಷರ ಗಾತ್ರ

ನವದೆಹಲಿ: ಆಟಗಾರರ ವಯಸ್ಸು ಪತ್ತೆಗಾಗಿ ನೂತನ ತಂತ್ರಾಂಶವೊಂದನ್ನು ಪ್ರಾಯೋಗಿಕವಾಗಿ ಬಳಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧವಾಗಿದೆ.

ಸದ್ಯ ಜಾರಿಯಲ್ಲಿರುವ ಟಿಡಬ್ಲ್ಯು3 (ಎಡಗೈ ಮತ್ತು ಮಣಿಗಂಟಿನ ಕ್ಷಕಿರಣ ಆಧಾರಿತ) ಪದ್ಧತಿಯ ಜೊತೆಗೆ ಹೊಸ ತಂತ್ರಾಂಶವನ್ನೂ ಬಳಸುವುದರಿಂದ ಪರೀಕ್ಷೆ, ಪ್ರಕ್ರಿಯೆಯ ಖರ್ಚಿನಲ್ಲಿ ಶೇ 80ರಷ್ಟು ಉಳಿತಾಯ ಮಾಡಬಹುದು ಎಂದು ಮಂಡಳಿ ಹೇಳಿದೆ.

ಟಿಡಬ್ಲ್ಯು3 ಟೆಸ್ಟ್‌ ಮಾಡಲು ₹2400 ಖರ್ಚಾಗುತ್ತದೆ. ಫಲಿತಾಂಶವು ಬರಲು 3–4 ದಿನಗಳು ಬೇಕು. ಹೊಸದಾಗಿ ಬಳಸಲು ಉದ್ದೇಶಿಸಿರುವ ಬೋನ್‌ಎಕ್ಸ್‌ಪರ್ಟ್‌ ಸಾಫ್ಟವೇರ್‌ ನಲ್ಲಿ ಕೇವಲ ₹ 288 ವೆಚ್ಚವಾಗಲಿದೆ. ಅಲ್ಲದೇ ತಕ್ಷಣವೇ ಫಲಿತಾಂಶವೇ ದೊರೆಯಲಿದೆ.

‘ಆಟಗಾರರು ತಮ್ಮ ತವರು ರಾಜ್ಯದಲ್ಲಿ ಬಿಸಿಸಿಐನಿಂದ ಗುರುತಿಸಲಾದ ಪ್ರಯೋಗಾಲಯಗಳಲ್ಲಿಯೇ ಎಕ್ಸ್‌ ರೇ ತೆಗೆಸಿ, ಚಿತ್ರವನ್ನು ಮಂಡಳಿಯ ಎವಿಪಿ ವಿಭಾಗಕ್ಕೆ ಕಳಿಸುತ್ತಾರೆ. ಎವಿಪಿಯ ಸಂಗ್ರಹಿಸಿದ ಚಿತ್ರಗಳು ಮತ್ತು ಮಾಹಿತಿಯನ್ನು ಸ್ವತಂತ್ರ ರೆಡಿಯೊಲಾಜಿಸ್ಟ್‌ಗಳಿಗೆ ಕಳಿಸುತ್ತದೆ. ಬೋನ್ ಏಜ್ (ಎಲುವಿನ ವಯಸ್ಸು) ಪತ್ತೆ ಮಾಡಲು ಸಮಯ ಹೆಚ್ಚು ತೆಗೆದುಕೊಳ್ಳುತ್ತಾರೆ. 38 ಸಂಸ್ಥೆಗಳ ಆಟಗಾರರ ಸಂಖ್ಯೆ ಹೆಚ್ಚಿದ್ದು ರೇಡಿಯೊಲಾಜಿಸ್ಟ್‌ಗಳ ಸಂಖ್ಯೆ ಕಡಿಮೆ ಇದೆ’ ಎಂದು ಮೂಲಗಳುತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT