ನವದೆಹಲಿ: ಜಪಾನ್ನ ಐಚಿ– ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಸಂಭವನೀಯರ ತಂಡವನ್ನು ಬಿಸಿಸಿಐ ಸಿದ್ಧಪಡಿಸಿದೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರು ಸ್ಥಾನ ಪಡೆದಿಲ್ಲ. 30 ಮಂದಿ ಆಟಗಾರರ ಪಟ್ಟಿಯನ್ನು ಬಿಸಿಸಿಐ ಶನಿವಾರ ಭಾರತ ಒಲಿಂಪಿಕ್ ಸಂಸ್ಥೆಗೆ ಸಲ್ಲಿಸಿದೆ.

ಆದರೆ ‘ವಂಡರ್ ಕಿಡ್’ ವೈಭವ್ ಸೂರ್ಯವಂಶಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಏಷ್ಯನ್ ಗೇಮ್ಸ್ ಸಂದರ್ಭದಲ್ಲೇ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಟಿ20, ಏಕದಿನ ಸರಣಿ ಕೈಗೊಳ್ಳಲಿರುವ ಕಾರಣ ಭಾರತ ಎರಡು ತಂಡಗಳನ್ನು ಆಯ್ಕೆ ಮಾಡುವುದು ಮೊದಲೇ ನಿರ್ಧಾರವಾಗಿತ್ತು. ವೆಸ್ಟ್ ಇಂಡೀಸ್ ತಂಡವು ಸೆ. 27 ರಿಂದ ಅ. 17ರ ಅವಧಿಯಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಗಿಲ್ ಏಕದಿನ ತಂಡಕ್ಕೆ ನಾಯಕರಾಗುವ ಕಾರಣ ಅವರನ್ನು ಏಷ್ಯನ್ ಗೇಮ್ಸ್ ಸಂಭವನೀಯರ ಪಟ್ಟಿಗೆ ಸೇರಿಸಿಲ್ಲ. ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3ರ ಅವಧಿಯಲ್ಲಿ ನಡೆಯಲಿವೆ.

ಸೂರ್ಯ ಅವರು 2028ರ ಒಲಿಂಪಿಕ್ಸ್ವರೆಗೆ ಆಗಲಿ, ಮುಂದಿನ ಟಿ20 ವಿಶ್ವಕಪ್ವರೆಗೆ (2027) ತಂಡದಲ್ಲಿರುವುದು ಅನುಮಾನ ಎನ್ನಲಾಗಿದೆ. ಅವರು ಹೆಸರು ಸೇರ್ಪಡೆಯಾಗಿದಿರುವುದು ನಿರೀಕ್ಷಿತವೇ ಆಗಿದೆ.

ಏಷ್ಯನ್ ಗೇಮ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಅಥವಾ ತಿಲಕ್ ವರ್ಮಾ ಅವರಲ್ಲಿ ಒಬ್ಬರು ನಾಯಕರಾಗುವ ನಿರೀಕ್ಷೆಯಿದೆ.

ಐಒಎಗೆ ಸಲ್ಲಿಸಿರುವ ಸಂಭವನೀಯರ ಪಟ್ಟಿ: ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ತಿಲಕ್ ವರ್ಮಾ, ಜಸ್ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ ಕೃಷ್ಣ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ಆಯುಷ್ ಬದೋನಿ, ಹರ್ಷ ದುಬೆ, ಧ್ರುವ್ ಜುರೇಲ್, ಖಲೀಲ್ ಅಹ್ಮದ್, ಋತುರಾಜ್ ಗಾಯಕವಾಡ್, ರವಿ ಬಿಷ್ಣೋಯಿ, ಶಾಬಾಜ್ ಅಹ್ಮದ್, ಶಿವಂ ದುಬೆ, ವಿಪ್ರಜ್ ನಿಗಂ, ಹರ್ಷಿತ್ ರಾಣಾ, ಯಶ್ ಠಾಕೂರ್, ವಾಷಿಂಗ್ಟನ್ ಸುಂದರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.