ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಣ್ಣು ಈಗ ಆಟಗಾರರ ‘ಸ್ಮಾರ್ಟ್ ಸುಲೋಚನೆ’ಯ ಮೇಲೆ ಬಿದ್ದಿದೆ!

ಹೌದು; ಇನ್ನು ಮುಂದೆ ಐಪಿಎಲ್ ಪಂದ್ಯಗಳ ಸಂದರ್ಭಗಳಲ್ಲಿ ಆಟಗಾರರು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳು ‘ಕನ್ನಡಕ’ಗಳನ್ನು (ಸನ್ಗ್ಲಾಸಸ್) ಬಳಸುವಂತಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಫೈ ಚಾಲಿತ ಕ್ಯಾಮೆರಾಗಳಿರುವ ಕನ್ನಡಕಗಳು ಲಭ್ಯ ಇವೆ. ವಿಡಿಯೊ ಕಾಲಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಕೂಡ ಇವುಗಳಿಂದ ಸಾಧ್ಯವಿದೆ. ಆದ್ದರಿಂದ ಇವುಗಳ ಬಳಕೆ ತಡೆಯಬೇಕು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಎಸ್ಯು) ವು ಫ್ರ್ಯಾಂಚೈಸಿಗಳಿಗೆ ಮಾರ್ಗಸೂಚಿ ನೀಡಿದೆ.

‘ಈ ಸಾಧನಗಳು ಲೈವ್ ಸ್ಟ್ರೀಮಿಂಗ್, ಸಂದೇಶಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದು, ಮೊಬೈಲ್ ಡೇಟಾ ಅಥವಾ ವೈ-ಫೈ ನೆಟ್ವರ್ಕ್ ಮೂಲಕ ಆಡಿಯೋ ಮತ್ತು ವಿಡಿಯೋ ಕರೆ ಮಾಡುವ ಸಾಮರ್ಥ್ಯಗಳನ್ನು ಒಳಗೊಂಡಿವೆ. ಸುಧಾರಿತ ಸಂವಹನ ವೈಶಿಷ್ಟ್ಯಗಳನ್ನು ಹೊಂದಿವೆ. ಆದ್ದರಿಂದ ಪಿಎಂಒಎ (ಪ್ಲೇಯರ್ಸ್ ಅ್ಯಂಡ್ ಮ್ಯಾಚ್ ಆಫಿಷಿಯಲ್ಸ್ ಏರಿಯಾ) ನಿಯಮದ ಪ್ರಕಾರ ಇಂತಹ ಕನ್ನಡಕಗಳನ್ನು ಸಂವಹನ ಹಾಗೂ ಎವಿ ರೆಕಾರ್ಡಿಂಗ್ ಸಾಧನೆಗಳೆಂದು ವರ್ಗೀಕರಿಸಲಾಗಿದೆ’ ಎಂದು ಫ್ರ್ಯಾಂಚೈಸಿಗಳಿಗೆ ನೀಡಿರುವ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಈಚೆಗೆ ಐಪಿಎಲ್ ಪಂದ್ಯವೊಂದರ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ರೋಮಿ ಭೀಂದರ್ ಅವರು ಡಗೌಟ್ನಲ್ಲಿ ಫೋನ್ ಬಳಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದಕ್ಕಾಗಿ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.

‘ಎಲ್ಲ ಆಟಗಾರರು, ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಸ್ಮಾರ್ಟ್ ಫೋನ್, ವಾಚ್ ಹಾಗೂ ಕನ್ನಡಕಗಳನ್ನು ಮೈದಾನದೊಳಗೆ ಒಯ್ಯದೇ, ಭದ್ರತಾ ಸಂಪರ್ಕ ಅಧಿಕಾರಿ (ಎಸ್ಎಲ್ಒ)ಯ ಸುಪರ್ದಿಗೆ ಕೊಟ್ಟು ಹೋಗಬೇಕು. ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದೂ ಮಂಡಳಿಯು ಎಚ್ಚರಿಸಿದೆ.

ಪ್ರಸಕ್ತ ವರ್ಷದ ಐಪಿಎಲ್ನಲ್ಲಿ ಈ ರೀತಿಯ ನಿಯಮಗಳು ಜಾರಿಯಾಗುತ್ತಿರುವುದು ಇದು ಮೊದಲಲ್ಲ. ಎರಡು ವಾರಗಳ ಹಿಂದಷ್ಟೇ ಆಟಗಾರರು, ನೆರವು ಸಿಬ್ಬಂದಿಗಳಿಗೆ ತಡರಾತ್ರಿಯಲ್ಲಿ ಪ್ರಯಾಣ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಅಲ್ಲದೇ ‘ಹನಿಟ್ರ್ಯಾಪ್’ ಅಗುವ ಆತಂಕದಿಂದಾಗಿ ತಂಡದವರು ತಂಗಿರುವ ಹೋಟೆಲ್ ಕೋಣೆಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು. ಭದ್ರತಾ ಅಧಿಕಾರಿ ಮತ್ತು ಫ್ರ್ಯಾಂಚೈಸಿಗಳ ವ್ಯವಸ್ಥಾಪಕರ ಅನುಮತಿ ಪಡೆಯದೇ ಆಟಗಾರರನ್ನು ಭೇಟಿಯಾಗುವಂತಿಲ್ಲ ಎಂದು ನಿರ್ದೇಶನ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.