ನವದೆಹಲಿ: ಹನಿ ಟ್ರ್ಯಾಪ್, ಕಾನೂನು ಸಮಸ್ಯೆ ಮತ್ತು ಭದ್ರತಾ ಅಪಾಯಗಳ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿರುವ ಬಿಸಿಸಿಐ, ಐಪಿಎಲ್ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತಂಡದ ಇತರೆ ಸಿಬ್ಬಂದಿ ತಂಗಿರುವ ಹೋಟೆಲ್ನ ಕೊಠಡಿಗಳಿಗೆ ಅನಧಿಕೃತ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಕೆಲ ಅವ್ಯವಸ್ಥೆ ಮತ್ತು ಶಿಷ್ಟಾಚಾರ ಉಲ್ಲಂಘನೆ ಕುರಿತಾದ ಸನ್ನಿವೇಶಗಳನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕವು ಗುರುತಿಸಿದ ನಂತರ, ಈ ನಿರ್ಧಾರಕ್ಕೆ ಬರಲಾಗಿದೆ. ಐಪಿಎಲ್ನಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಸಂಬಂಧಿತ ಕೆಲ ಅಹಿತಕರ ಸಂಗತಿಗಳು ನಡೆದ ಇತಿಹಾಸವಿದೆ.

ಹೊರಗಿನವರು ತಂಡದ ಸಿಬ್ಬಂದಿ ಮತ್ತು ಆಟಗಾರರನ್ನು ಭೇಟಿ ಮಾಡಲು ತಂಡದ ಮ್ಯಾನೇಜರ್ ಕಡೆಯಿಂದ ಲಿಖಿತ ಅನುಮತಿ ಪಡೆದಿರಬೇಕು ಎಂದು ಐಪಿಎಲ್ನ 10 ತಂಡಗಳಿಗೆ ಬಿಸಿಸಿಐ ಸಲಹೆಯಲ್ಲಿ ತಿಳಿಸಿದೆ.

‘ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕೆಲ ಸಂಗತಿಗಳ ಮೇಲ್ವಿಚಾರಣೆ ನಡೆಸಿದ ನಂತರ ಈ ಸಲಹೆ ನೀಡಲಾಗಿದೆ. ಈ ನಿರ್ಧಾರವು ಐಪಿಎಲ್ನಲ್ಲಿ ವೃತ್ತಿಪರತೆ, ಭದ್ರತಾ ಅರಿವು ಮತ್ತು ಶಿಸ್ತು ಅನುಸರಣೆಯ ಮಾನದಂಡಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಫ್ರಾಂಚೈಸಿಗಳ ಸಿಇಒಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ಕೆಲ ಸ್ವೀಕಾರಾರ್ಹವಲ್ಲದ ಘಟನೆಗಳನ್ನು ಬಿಸಿಸಿಐ ಗುರುತಿಸಿದೆ. ಅವುಗಳನ್ನು ಹಾಗೇ ಬಿಟ್ಟರೆ ಟೂರ್ನಿ, ಫ್ರಾಂಚೈಸಿ ಮತ್ತು ಬಿಸಿಸಿಐ ಘನತೆಗೆ ಧಕ್ಕೆ ಬರುವ ಸಾಧ್ಯತೆ ಇತ್ತು. ಇವು ವ್ಯಕ್ತಿಗಳು ಮತ್ತು ಫ್ರಾಂಚೈಸಿಗಳನ್ನು ಗಂಭೀರ ಸ್ವರೂಪದ ಕಾನೂನು ಸಮಸ್ಯೆ ಮತ್ತು ಭದ್ರತಾ ಅಪಾಯಗಳಿಗೆ ಒಡ್ಡುವ ಸಾಧ್ಯತೆ ಇತ್ತು’ ಎಂದು ಅವರು ಎಚ್ಚರಿಸಿದ್ದಾರೆ.

ಕೆಲವು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ, ತಂಡದ ಮ್ಯಾನೇಜರ್ಗೆ ತಿಳಿಸದೇ ಅಥವಾ ಅವರ ಅನುಮೋದನೆ ಇಲ್ಲದೆ ತಮ್ಮ ಹೋಟೆಲ್ ಕೊಠಡಿಗಳಿಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಎಂಬುದನ್ನು ಮಂಡಳಿಯು ಗಮನಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ರೀತಿ ಹಲವು ಬಾರಿ ನಡೆದಿದ್ದು, ಅದು ತಂಡದ ಮ್ಯಾನೇಜರ್ ಗಮನಕ್ಕೆ ಬಂದಿಲ್ಲ. ಇಂತಹ ನಡವಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದೂ ಅವರು ತಿಳಿಸಿದ್ದಾರೆ.

ತಂಡಗಳ ಆಟಗಾರರು, ಸಹಾಯಕ ಸಿಬ್ಬಂದಿಗೆ ಈಗ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು(ಎಸ್ಒಪಿ) ನೀಡಲಾಗಿದ್ದು, ಅದನ್ನೇ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.