ಪಂತ್‌ಗೆ ಮನ್ನಣೆ; ಧವನ್‌ಗೆ ಹಿಂಬಡ್ತಿ

ಶನಿವಾರ, ಮಾರ್ಚ್ 23, 2019
24 °C
ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿ ಬಿಡುಗಡೆ

ಪಂತ್‌ಗೆ ಮನ್ನಣೆ; ಧವನ್‌ಗೆ ಹಿಂಬಡ್ತಿ

Published:
Updated:

ನವದೆಹಲಿ: ಯುವ ಬ್ಯಾಟ್ಸ್‌ ಮನ್ ಮತ್ತು ವಿಕೆಟ್ ಕೀಪರ್‌ ರಿಷಭ್ ಪಂತ್ ಅವರ ಅಮೋಘ ಆಟಕ್ಕೆ ಮನ್ನಣೆ ನೀಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರನ್ನು ಕೇಂದ್ರೀಯ ಗುತ್ತಿಗೆ ಪದ್ಧತಿಯಡಿ ಸೇರಿ ಸಿದೆ. ಅವರಿಗೆ ‘ಎ’ ದರ್ಜೆಯ ಸ್ಥಾನ ನೀಡಲಾಗಿದೆ.

ಗುತ್ತಿಗೆಯ ಹೊಸ ಪಟ್ಟಿಯನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಿರುವ ಬಿಸಿಸಿಐ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್‌ ಮತ್ತು ವೇಗಿ ಭುವನೇಶ್ವರ್ ಕುಮಾರ್‌ ಅವರಿಗೆ ಹಿಂಬಡ್ತಿ ನೀಡಿದೆ. ಅವರನ್ನು ಎಲೀಟ್‌ ‘ಎ’ ದರ್ಜೆಯಿಂದ ‘ಎ’ ದರ್ಜೆಗೆ ಇಳಿಸಲಾಗಿದೆ. ನಾಲ್ಕು ದರ್ಜೆಗಳಲ್ಲಿ ಒಟ್ಟು 25 ಮಂದಿ ಆಟಗಾರ ರನ್ನು ಗುತ್ತಿಗೆಯಡಿ ತರಲಾಗಿದೆ. ಕಳೆದ ವರ್ಷ 26 ಮಂದಿ ಇದ್ದರು.

ಎಲೀಟ್‌ ‘ಎ’ ದರ್ಜೆಯವರು ₹ 7 ಕೋಟಿ ಪಡೆಯಲಿದ್ದು ‘ಎ’ ದರ್ಜೆಯವರು ₹ 5 ಕೋಟಿ, ‘ಬಿ’ ದರ್ಜೆಯವರು ₹ 3 ಕೋಟಿ ಮತ್ತು ‘ಸಿ’ ದರ್ಜೆಯವರು ₹ 1 ಕೋಟಿ ಪಡೆ ಯಲಿದ್ದಾರೆ. ಶಿಖರ್‌ ಧವನ್‌ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಹಿಂಬಡ್ತಿ ನೀಡಿದ ಕಾರಣ ಅತಿ ಹೆಚ್ಚು ಮೊತ್ತ ಪಡೆಯಲಿರುವ ದರ್ಜೆಯಲ್ಲಿ ಈಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ಮಾತ್ರ ಇದ್ದಾರೆ.

‘ಸಿ’ ಗುಂಪಿನಲ್ಲಿ ಎಡಗೈ ವೇಗಿ ಖಲೀಲ್‌ ಅಹಮ್ಮದ್ ಮತ್ತು ಬ್ಯಾಟ್ಸ್‌ ಮನ್‌ ಹನುಮ ವಿಹಾರಿ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್‌ ಮತ್ತು ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿರುವ ಮಯಂಕ್‌ ಅಗರವಾಲ್‌, ಪೃಥ್ವಿ ಶಾ ಮತ್ತು ವಿಜಯಶಂಕರ್‌ ಅವರು ಪಟ್ಟಿ ಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಕನಿಷ್ಠ ಮೂರು ಟೆಸ್ಟ್ ಮತ್ತು ಎಂಟು ಏಕದಿನ ಪಂದ್ಯಗಳಲ್ಲಿ ಆಡಿದವರನ್ನು ಮಾತ್ರ ಪರಿಗಣಿಸಲಾಗುವುದರಿಂದ ಅವರು ಸ್ಥಾನ ಗಳಿಸಲಿಲ್ಲ.

ಮುರಳಿ, ರೈನಾಗೆ ಕೊಕ್‌: ಮುರಳಿ ವಿಜಯ್‌ ಮತ್ತು ಸುರೇಶ್‌ ರೈನಾ ಅವ ರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಧೋನಿ ನಿವೃತ್ತಿಯ ನಂತರ ಎಲ್ಲ ಮಾದ ರಿಯ ಕ್ರಿಕೆಟ್‌ನಲ್ಲೂ ಭಾರತ ತಂಡದ ವಿಕೆಟ್ ಕೀಪರ್ ಆಗುವ ಸಾಧ್ಯತೆ ಇರುವ ಪಂಥ್‌ ನೇರವಾಗಿ ‘ಸಿ’ ದರ್ಜೆಗೆ ಅರ್ಹತೆ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಗುತ್ತಿಗೆ ಪಡೆದ ಆಟಗಾರರು

ಎಲೀಟ್‌ ‘ಎ’ ದರ್ಜೆ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ; ‘ಎ’ ದರ್ಜೆ: ಮಹೇಂದ್ರ ಸಿಂಗ್ ಧೋನಿ, ಚೇತೇಶ್ವರ ಪೂಜಾರ, ರಿಷಭ್ ಪಂತ್‌, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್‌, ಶಿಖರ್‌ ಧವನ್‌, ಭುವನೇಶ್ವರ್ ಕುಮಾರ್‌, ಅಜಿಂಕ್ಯ ರಹಾನೆ;

‘ಬಿ’ ದರ್ಜೆ: ಕೆ.ಎಲ್‌.ರಾಹುಲ್‌, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್‌, ಯಜುವೇಂದ್ರ ಚಾಹಲ್‌; ‘ಸಿ’ ದರ್ಜೆ: ಕೇದಾರ್ ಜಾಧವ್‌, ದಿನೇಶ್ ಕಾರ್ತಿಕ್‌, ಅಂಬಟಿ ರಾಯುಡು, ಮನೀಷ್ ಪಾಂಡೆ, ಹನುಮ ವಿಹಾರಿ, ಖಲೀಲ್ ಅಹಮ್ಮದ್‌, ವೃದ್ಧಿಮಾನ್ ಸಹಾ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !