ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಬಂಧನೆ ಸಡಿಲವಾದರೆ 18ರ ನಂತರ ಅಭ್ಯಾಸಕ್ಕೆ ಅವಕಾಶ: ಬಿಸಿಸಿಐ

ಬಿಸಿಸಿಐ ಖಜಾಂಚಿ ಅರುಣಸಿಂಗ್ ಧುಮಾಲ್ ಇಂಗಿತ
Last Updated 14 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕು ತಡೆಯಲು ವಿಧಿಸಲಾಗಿರುವ ಮೂರನೇ ಹಂತದ ಲಾಕ್‌ಡೌನ್‌ ನಿಬಂಧನೆಗಳನ್ನು ಇದೇ 17ರ ನಂತರ ಸಡಿಲಗೊಳಿಸಿದರೆ, ಆಟಗಾರರಿಗೆ ಹೊರಾಂಗಣ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಬಹುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ.

ಸುಮಾರು ಎರಡು ತಿಂಗಳುಗಳಿಂದ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಸರ್ಕಾರವು ನೀಡಲಿರುವ ಅವಕಾಶಗಳನ್ನು ನೋಡಿಕೊಂಡು ಯೋಜನೆ ರೂಪಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

‘ಆಟಗಾರರು ಎಲ್ಲಿಗೂ ಪ್ರಯಾಣಿಸುವಂತಿಲ್ಲ. ಆದ್ದರಿಂದ ಎಲ್ಲರನ್ನೂ ಒಂದೆಡೆ ಸೇರಿಸಿ ಕೌಶಲ್ಯಾಧಾರಿತ ತರಬೇತಿ ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ಆಟಗಾರರ ನಿವಾಸಗಳ ಸಮೀಪದ ಕ್ರೀಡಾಂಗಣಗಳ ನೆಟ್ಸ್‌ನಲ್ಲಿಯೇ ಅಭ್ಯಾಸ ಮಾಡುವಂತೆ ವ್ಯವಸ್ಥೆ ಒದಗಿಸಲು ಯೋಚಿಸುತ್ತಿದ್ದೇವೆ. ಯಾವುದಕ್ಕೂ ಕೇಂದ್ರ ಸರ್ಕಾರವು ಪ್ರಕಟಿಸುವ ಮಾರ್ಗಸೂಚಿಯನ್ನು ನೋಡಿಕೊಂಡು ನಿರ್ಧಾರ ಕೈಗೋಳ್ಳುತ್ತೇವೆ’ ಎಂದಿದ್ದಾರೆ.

ಪ್ರಸ್ತುತ ಭಾರತ ತಂಡದ ಫಿಟ್‌ನೆಸ್‌ ಕೋಚ್‌ ಮತ್ತು ಟ್ರೇನರ್‌ಗಳು ನೀಡಿರುವ ಮಾರ್ಗಸೂಚಿಯನ್ನು ಆಟಗಾರರು ಪಾಲಿಸುತ್ತಿದ್ದಾರೆ. ತಮ್ಮ ಮನೆಗಳಲ್ಲಿಯೇ ಅವರು ವ್ಯಾಯಾಮ ಮತ್ತು ಅಭ್ಯಾಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮಧ್ಯಮವೇಗಿ ಮೊಹಮ್ಮದ್ ಶಮಿ ಅವರು ಮಾತ್ರ ತಮ್ಮ ತವರೂರು ಸಾಹಸಪುರದಲ್ಲಿ (ಉತ್ತರಪ್ರದೇಶ ರಾಜ್ಯ) ಸ್ವಂತ ಕ್ರಿಕೆಟ್ ಮೈದಾನ ಹೊಂದಿದ್ದಾರೆ. ಅವರು ಅದರಲ್ಲಿಯೇ ಓಟ ಮತ್ತಿತರ ಅಭ್ಯಾಸಗಳನ್ನು ಮಾಡುತ್ತಿದ್ದಾರೆ. ಉಳಿದಂತೆ ಬಹುತೇಕ ಎಲ್ಲ ಆಟಗಾರರು ಮಹಾನಗರಿಗಳಲ್ಲಿ ವಾಸವಾಗಿರುವುದರಿಂದ ತಮ್ಮ ಮನೆಯೊಳಗಿರುವ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT