ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಕ್ರಿಕೆಟಿಗರು, ಅಂಪೈರ್‌ಗಳಿಗೆ ಪಿಂಚಣಿ ಹೆಚ್ಚಿಸಿದ ಬಿಸಿಸಿಐ

Last Updated 14 ಜೂನ್ 2022, 4:38 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದಲ್ಲಿ ಭರ್ಜರಿ ಹಣ ಗಳಿಸಿದ ದಿನದಂದೇ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಮಾಜಿ ಕ್ರಿಕೆಟಿಗರು ಮತ್ತು ಅಂಪೈರ್‌ಗಳಿಗೆ ಶುಭಸುದ್ದಿ ನೀಡಿದೆ.

ಮಾಜಿ ಆಟಗಾರರ ತಿಂಗಳ ಪಿಂಚಣಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಪ್ರಥಮ ದರ್ಜೆ ಪಂದ್ಯವನ್ನಾಡಿದ ಮಾಜಿ ಆಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು ₹ 15 ಸಾವಿರದಿಂದ ₹ 30 ಸಾವಿರಕ್ಕೆ ಏರಿಕೆ ಮಾಡಿದೆ.

ಪ್ರತಿ ತಿಂಗಳು ₹ 37,500 ಪಿಂಚಣಿ ಪಡೆಯುತ್ತಿದ್ದ ಟೆಸ್ಟ್‌ ತಂಡದ ಮಾಜಿ ಆಟಗಾರರು ಇನ್ನು ₹ 60 ಸಾವಿರ ಹಾಗೂ ₹ 50 ಸಾವಿರ ಪಡೆಯುತ್ತಿದ್ದವರು ₹ 70 ಸಾವಿರ ಪಡೆಯಲಿದ್ದಾರೆ.

ರಾಷ್ಟ್ರೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯರು ₹ 30 ಸಾವಿರದ ಬದಲು ₹ 52,500 ಪಡೆಯಲಿದ್ದಾರೆ. 2003ಕ್ಕೂ ಮುನ್ನ ನಿವೃತ್ತಿಯಾಗಿದ್ದ ಪ್ರಥಮ ದರ್ಜೆ ಕ್ರಿಕೆಟ್‌ ಆಟಗಾರರು ₹ 22,500 ರ ಬದಲು ₹ 45 ಸಾವಿರ ಗಳಿಸಲಿದ್ದಾರೆ.

’ಮಾಜಿ ಆಟಗಾರರು ಮತ್ತು ಅಂಪೈರ್‌ಗಳ ಪಿಂಚಣಿ ಹೆಚ್ಚಿಸಿರುವುದನ್ನು ಘೋಷಿಸಲು ಸಂತಸವಾಗುತ್ತಿದೆ. ಸುಮಾರು 900 ಆಟಗಾರರು ಇದರ ಲಾಭ ಪಡೆಯಲಿದ್ದಾರೆ. ಇದರಲ್ಲಿ ಶೇ 75 ರಷ್ಟು ಮಂದಿಯ ಪಿಂಚಣಿಯನ್ನು ಶೇ 100 ರಷ್ಟು ಹೆಚ್ಚಿಸಲಾಗಿದೆ‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT