ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಅಜಿತ್ ಅಗರ್ಕರ್, ಕಳೆದ ಕೆಲವು ದಿನಗಳ ಹಿಂದೆ ತಮ್ಮ ಅಧಿಕಾರವಧಿಯನ್ನು 2027ರ ಏಕದಿನ ವಿಶ್ವಕಪ್ ವರೆಗೂ ವಿಸ್ತರಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಬಿಸಿಸಿಐ ಒಪ್ಪಿರುವುದಾಗಿ ವರದಿಯಾಗಿದೆ.

2023ರಲ್ಲಿ ಬಿಸಿಸಿಐ, ಭಾರತ ತಂಡದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅವರನ್ನು ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 2025ರಲ್ಲಿ ಇವರ ಅಧಿಕಾರವಧಿಯನ್ನು ಹೆಚ್ಚುವರಿಯಾಗಿ ಒಂದು ವರ್ಷಕ್ಕೆ ವಿಸ್ತರಿಸಿತ್ತು. ಇವರ ಅಧಿಕಾರವಧಿಯಲ್ಲಿ ಭಾರತ ತಂಡವು 3 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರ ಟಿ20 ವಿಶ್ವಕಪ್, 2025 ಚಾಂಪಿಯನ್ಸ್ ಟ್ರೋಫಿ ಹಾಗೂ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 2026ರ ಟಿ20 ವಿಶ್ವಕಪ್ ಗೆದ್ದಿದೆ. ಇದರ ಜೊತೆಗೆ ತವರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಫೈನಲ್ ತಲುಪಿತ್ತು.

ಇದೀಗ ಬಿಸಿಸಿಐ 2027ರ ಏಕದಿನ ವಿಶ್ವಕಪ್ವರೆಗೂ ಆಗರ್ಕರ್ ಅವರನ್ನು ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೇ ಉಳಿಸಿಕೊಳ್ಳಲಿದೆ. ಇವರ ಅಧಿಕಾರಾವಧಿಯಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಿದೆ. ಹಾಗಾಗಿ ಅಧಿಕಾರದ ವಿಸ್ತರಣೆಯಾಗಲಿದೆ ಎಂದು ವರದಿಯಾಗಿದೆ.

‘ಭಾರತದ ಟಿ20 ತಂಡವನ್ನು ಸೂರ್ಯಕುಮಾರ್ ಯಾದವ್ ಅವರು ಮುನ್ನಡೆಸುತ್ತಿದ್ದಾರೆ. ಆದರೆ ಅವರು ಬ್ಯಾಟರ್ ಆಗಿ ವಿಫಲರಾಗುತ್ತಿದ್ದಾರೆ. ಸದ್ಯಕ್ಕೆ ಅವರೇ ತಂಡವನ್ನು ಮುನ್ನಡೆಸುತ್ತಾರೆ. ಆದರೆ 2028ರವರೆಗೆ ಅವರೇ ಇರುತ್ತಾರೆ ಎಂಬುದು ಅವರ ಪ್ರದರ್ಶನದ ಮೇಲೆ ನಿರ್ಧಾರವಾಗುತ್ತದೆ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.