ನವದೆಹಲಿ (ಪಿಟಿಐ): ಡಗ್ಔಟ್ನಲ್ಲಿ ಮೊಬೈಲ್ ಬಳಸುವ ಮೂಲಕ ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸಿದ ರಾಜಸ್ಥಾನ ರಾಯಲ್ಸ್ ಟೀಮ್ ಮ್ಯಾನೇಜರ್ ರೋಮಿ ಬಿಂದರ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹1 ಲಕ್ಷ ದಂಡ ವಿಧಿಸಿದೆ.

ಮಂಡಳಿ ನೀಡಿದ ಷೊಕಾಸ್ ನೋಟಿಸ್ಗೆ ಅವರ ಉತ್ತರ ತೃಪ್ತಿ ದಾಯಕವಾಗಿಲ್ಲದ ಕಾರಣ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಏಪ್ರಿಲ್ 10ರಂದು ನಡೆದ ಪಂದ್ಯದ ವೇಳೆ ಬಿಂದರ್ ನಿಯಮ ಉಲ್ಲಂಘಿಸಿ ದ್ದರು. ಅವರಿಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ನೇತೃತ್ವ ವಹಿಸಿದ್ದ ಶರದ್ ಕುಮಾರ್ ಅವರು ಷೋಕಾಸ್ ನೋಟಿಸ್ ನೀಡಿ ವಿವರಣೆ ಕೇಳಿದ್ದರು. ಶಿಷ್ಟಾಚಾರದಂತೆ ಆಟಗಾರರು ಮತ್ತು ಅಧಿಕಾರಿಗಳು ಡಗ್ಔಟ್ನಲ್ಲಿ ಮೊಬೈಲ್ ಬಳಸುವಂತಿಲ್ಲ. ಆದರೆ ಡ್ರೆಸಿಂಗ್ ರೂಮ್ನಲ್ಲಿ ಬಳಸಲು ಅಡ್ಡಿಯಿಲ್ಲ.

‘ಶರದ್ ಕುಮಾರ್ ಅವರ ತಂಡ ಬಿಂದರ್ ಅವರ ಪ್ರತಿಕ್ರಿಯೆ ಪರಿಶೀಲಿಸಿದ್ದು ಅವರು ದೋಷಿ ಎಂಬುದು ಸಾಬೀತಾಗಿದೆ. ಮೊದಲ ಬಾರಿ ಮಾಡಿದ ತಪ್ಪಿಗಾಗಿ ₹1 ಲಕ್ಷ ದಂಡ ವಿಧಿಸಲಾಗಿದೆ. ನೋಟಿಸ್ಗೆ ಅವರ ಉತ್ತರ ಸಮರ್ಪಕವಾಗಿಲ್ಲದ ಕಾರಣ ಎಚ್ಚರಿಕೆ ಸಹ ನೀಡಲಾಗಿದೆ’ ಎಂದು ಸೈಕಿಯಾ ತಿಳಿಸಿದ್ದಾರೆ.

ಬಿಂದರ್ ಅವರು ಡಗ್ಔಟ್ನಲ್ಲಿ ಸ್ಮಾರ್ಟ್ ಫೋನ್ ಸ್ಕ್ರಾಲ್ ಮಾಡುತ್ತಿರುವ ಮತ್ತು ಪಕ್ಕದಲ್ಲಿ ಕುಳಿತಿದ್ದ ವೈಭವ್ ಸೂರ್ಯವಂಶಿ ಅದನ್ನು ಕುತೂಹಲದಿಂದ ಗಮನಿಸುತ್ತಿದ್ದ ದೃಶ್ಯ ಸೆರೆಯಾಗಿತ್ತು. ಆದರೆ ಸೂರ್ಯವಂಶಿ ಅವರಿಗೆ ದಂಡ ವಿಧಿಸಿಲ್ಲ. ಅವರು ಅಮಾಯಕ. ಅವರಿಗೆ ನಿಯಮಗಳ ಬಗ್ಗೆ ತಂಡವು ಹೆಚ್ಚಿನ ತಿಳಿವಳಿಕೆ ನೀಡಬೇಕೆಂದು ಬಿಸಿಸಿಐ ಬಯಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-51-67063394

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.