2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಆಟಗಾರರು ಅನೇಕ ಸಂದರ್ಭಗಳಲ್ಲಿ ಶಿಸ್ತು ಕ್ರಮಗಳನ್ನು ಉಲ್ಲಂಘಿಸಿರುವುದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

‘ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸ್ತುತ ಆವೃತ್ತಿಯಲ್ಲಿ ಅಶಿಸ್ತು ಕಂಡು ಬಂದಿರುವುದರಿಂದ ಮತ್ತಷ್ಟು ಕಠಿಣ ನಿಯಮಗಳು ಪರಿಚಯಿಸಲು ಬಿಸಿಸಿಐ ಸಜ್ಜಾಗಿದೆ. ಮಂಡಳಿಗೆ ಮುಜುಗರ ಉಂಟುಮಾಡುವ ಹಲವು ಘಟನೆಗಳು ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಐಪಿಎಲ್ ಫ್ರಾಂಚೈಸಿಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಐಪಿಎಲ್ನಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಸಲುವಾಗಿ, ಗೊತ್ತಿದ್ದೂ ಅಪರಾಧ ಎಸಗುವುದು ಮತ್ತು ಹನಿ ಟ್ರ್ಯಾಪಿಂಗ್ಗೆ ಸಂಬಂಧಿಸಿದ ಅಪಾಯಗಳ ಕುರಿತು ಫ್ರಾಂಚೈಸಿಗಳು ಮತ್ತು ಆಟಗಾರರು ಎಚ್ಚರಿಕೆಯಿಂದ ಇರಲು ಬಿಸಿಸಿಐ ಸೂಚನೆ ನೀಡಿದೆ.

ಆಟಗಾರರ ಹೋಟೆಲ್ ಕೊಠಡಿ, ತಂಡದ ಬಸ್ ಮತ್ತು ಡಗೌಟ್ಗಳಂತಹ ಸುರಕ್ಷಿತ ವಲಯಗಳಿಗೆ ಅಪರಿಚಿತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ವೇಪಿಂಗ್ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಈ ಘಟನೆಯ ಬಳಿಕ ಇ–ಸಿಗರೇಟ್ ಸೇದುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವರದಿ ತಿಳಿಸಿದೆ.

ಪಂದ್ಯಾವಳಿಯ ಸಮಯದಲ್ಲಿ ಇತರೆ ಆಟಗಾರರು ಮತ್ತು ಫ್ರಾಂಚೈಸಿಯ ಮಾಲೀಕರು, ಇತರೆ ಅಧಿಕಾರಿಗಳು ಆಟಗಾರರ ಜೊತೆ ಮಾತುಕತೆ ನಡೆಸುವಂತಿಲ್ಲ.
.ಐಪಿಎಲ್ ‘ಹನಿಟ್ರ್ಯಾಪ್’ ತಡೆಗೆ ಬಿಸಿಸಿಐ ನಿಯಮ.ಶಾಸಕರ ಟಿಕೆಟ್ ದಾಹ: ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್ಗೆ ಶಿಫ್ಟ್.
ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಕಂಟೆಂಟ್ಗಾಗಿ ಆಟಗಾರರ ಕೊಠಡಿ ಬಳಿ ಅಥವಾ ತರಬೇತಿ ಅವಧಿಯಲ್ಲಿ ವಿಡಿಯೊ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಪಂದ್ಯಾವಳಿಯ ಸಂದರ್ಭದಲ್ಲಿ ಮೊಬೈಲ್ ಬಳಕೆ ನಿಷೇಧ ಹಾಗೂ ಕೊಠಡಿಯಿಂದ ಹೊರಹೋಗುವಾಗ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇನ್ನುಮುಂದೆ ಯಾವುದೇ ಆಟಗಾರ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.