ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ: ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ

Last Updated 24 ಜುಲೈ 2020, 15:10 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಗೇಮ್ ಡೆವಲಪ್‌ಮೆಂಟ್ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಮೊದಲು ಈ ಹುದ್ದೆಯ ಪ್ರಭಾರಿಯಾಗಿದ್ದ ಕ್ರಿಕೆಟ್ ಕಾರ್ಯಾಚರಣೆಯ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಈಚೆಗೆ ರಾಜೀನಾಮೆ ನೀಡಿದ್ದರು. ಅದರಿಂದಾಗಿ ಈ ಸ್ಥಾನವು ತೆರವಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 7ರಂದು ಕೊನೆಯ ದಿನವಾಗಿದೆ. ಈ ಹಿಂದೆ ಜಿಎಂ ಆಗಿದ್ದ ರತ್ನಾಕರ್ ಶೆಟ್ಟಿ ಅವರು 2018ರ ಮಾರ್ಚ್‌ನಲ್ಲಿ ನಿವೃತ್ತರಾಗಿದ್ದರು.

ಕರೀಂ ಅವರು 2017ರಲ್ಲಿ ಕ್ರಿಕೆಟ್ ಕಾರ್ಯಾಚರಣೆ ವಿಬಾಗದ ಜಿಎಂ ಆಗಿ ನೇಮಕವಾಗಿದ್ದರು. ಅವರು ದೇಶಿ ಮತ್ತು ಮಹಿಳಾ ಕ್ರಿಕೆಟ್ ವಿಭಾಗದ ಪ್ರಭಾರಿ ಕೂಡ ಆಗಿದ್ದರು.

’ಪಂದ್ಯಗಳ ಆಯೋಜನೆಯ ನಿಬಂಧನೆಗಳು, ಕ್ರೀಡಾಂಗಣಗಳ ಗುಣಮಟ್ಟ, ಪಿಚ್ ಮತ್ತು ಔಟ್‌ಫೀಲ್ಡ್‌ ಕಾರ್ಯಕ್ಷಮತೆಗಳ ನಿರ್ವಹಣೆಯ ಹೊಣೆ ಈ ವಿಭಾಗಕ್ಕೆ ಇರುತ್ತದೆ. ಆದ್ದರಿಂದ ಈ ಹುದ್ದೆಯು ಬಹಳ ಮಹತ್ವದ್ದಾಗಿದೆ‘ ಎಂದು ಬಿಸಿಸಿಐ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT