ಬುಧವಾರ, ಅಕ್ಟೋಬರ್ 16, 2019
28 °C

ಬಿಸಿಸಿಐ ವಾರ್ಷಿಕ ಮಹಾಸಭೆ ಟಿಎನ್‌ಸಿಎ, ಎಚ್‌ಸಿಎಗೆ ನಿರ್ಬಂಧ

Published:
Updated:

ಪುಣೆ: ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ) ಮತ್ತು ಹರಿಯಾಣ ಕ್ರಿಕೆಟ್‌ ಸಂಸ್ಥೆ (ಎಚ್‌ಸಿಎ)ಗಳಿಗೆ, ಇದೇ 23ರಂದು ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಳ್ಳದಂತೆ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ನಿರ್ಬಂಧ ಹೇರಿದೆ. 

ಪರಿಷ್ಕೃತ ನಿಯಮಾವಳಿಗೆ ಅನುಸಾರವಾಗಿ ನಡೆದುಕೊಳ್ಳದಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ವಿರುದ್ಧವೂ ಇದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

‘ಸುಪ್ರೀಂ ಕೋರ್ಟ್‌ನ 2018 ಆಗಸ್ಟ್‌ 9ರ ಆದೇಶದಂತೆ ನಿಯಮಾವಳಿಗಳಿಗೆ ತಿದ್ದುಪಡಿ ಮಾಡದ ಕಾರಣ ಈ ಎರಡು ರಾಜ್ಯ ಘಟಕಗಳಿಗೆ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಿರುವುದು ನಿಜ’ ಎಂದು ಸಿಒಎಗೆ ನಿಕಟವಾಗಿರುವ ಮೂಲವೊಂದು ಪಿಟಿಐಗೆ ಖಚಿತಪಡಿಸಿದೆ.

Post Comments (+)