ನವದೆಹಲಿ: ದೇಶದ ರಾಜಧಾನಿಯ ಆ ಭವ್ಯ ವೇದಿಕೆಯಲ್ಲಿ ಭಾನುವಾರ ರಾತ್ರಿ ಭಾರತದ ‘ಕ್ರಿಕೆಟ್ ಶಕ್ತಿ’ಯ ಪ್ರದರ್ಶನ ನಡೆಯಿತು. ಹಾಲಿ ಮತ್ತು ಭಾವಿ ತಾರೆಗಳು ಕಣ್ಮನ ಸೆಳೆದರು. 14 ವರ್ಷದ ವೈಭವ್ ಸೂರ್ಯವಂಶಿಯವರಿಂದ ಆರಂಭವಾಗಿ 70 ವರ್ಷದ ದಿಗ್ಗಜ ರೋಜರ್ ಬಿನ್ನಿಯವರೆಗೂ ಖ್ಯಾತನಾಮರು ಅಲ್ಲಿದ್ದರು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿದ್ದ ‘ನಮನ್ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಅದು.

ಭಾರತ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡಗಳ ನಾಯಕ ಶುಭಮನ್ ಗಿಲ್ 2024–25ರ ಸಾಲಿನ ‘ಪಾಲಿ ಉಮ್ರಿಗರ್ ಶ್ರೇಷ್ಠ ಆಟಗಾರ’ ಪ್ರಶಸ್ತಿ ಗಳಿಸಿದರು. ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಶ್ರೇಷ್ಠ ಅಂತರರಾಷ್ಟ್ರೀಯ ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಗಿಲ್ ಅವರಿಗೆ ಇದು ಎರಡನೇ ಪ್ರಶಸ್ತಿ ಆಗಿದೆ. 2023ರಲ್ಲಿಯೂ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು.

2025ರಲ್ಲಿ ಗಿಲ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ನಾಯಕರಾಗಿದ್ದರು. ಐದು ಪಂದ್ಯಗಳ ಸರಣಿಯಲ್ಲಿ ತಂಡವು ಸಮಬಲ ಸಾಧಿಸಿತು. ಅದರಲ್ಲಿ 10 ಇನಿಂಗ್ಸ್ಗಳಲ್ಲಿ 754 ರನ್ ಪೇರಿಸುವಲ್ಲಿ ಗಿಲ್ ಯಶಸ್ವಿಯಾಗಿದ್ದರು. ಅದರಲ್ಲಿ ನಾಲ್ಕು ಶತಕಗಳಿದ್ದವು. ಭಾರತವು ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿಯೂ ಗಿಲ್ ಪಾತ್ರ ಮಹತ್ವದ್ದಾಗಿತ್ತು. ಆರಂಭಿಕ ಪಂದ್ಯದಲ್ಲಿ ಬಾಂಗ್ಲಾ ಎದುರು ಶತಕ ಗಳಿಸಿದ್ದರು. ಟೂರ್ನಿಯಲ್ಲಿ ಒಟ್ಟು 188 ರನ್ ಸೇರಿಸಿದ್ದರು.

ಸ್ಮೃತಿ ಅವರು ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 1703 ರನ್ ಪೇರಿಸಿದ್ದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಮಹಿಳಾ ಆಟಗಾರ್ತಿಯೆಂಬ ದಾಖಲೆ ಬರೆದಿದ್ದರು. ಭಾರತ ಮಹಿಳಾ ತಂಡವು ಮೊದಲ ಬಾರಿಗೆ ಜಯಿಸಿದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಮೃತಿ 9 ಪಂದ್ಯಗಳಿಂದ 434 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತ ತಂಡದ ಆಟಗಾರ್ತಿ ಅವರಾಗಿದ್ದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಐಸಿಸಿ ವಿಶ್ವಕಪ್ ಜಯಿಸಿದ ತಂಡಗಳನ್ನೂ ಗೌರವಿಸಲಾಯಿತು.

ಪುರುಷರ ವಿಭಾಗದಲ್ಲಿ ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್, 19 ವರ್ಷದೊಳಗಿನವರ ಏಕದಿನ ವಿಶ್ವಕಪ್, ಮಹಿಳೆಯರ ವಿಭಾಗದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು 19 ವರ್ಷದೊಳಗಿನವರ ಟಿ20 ವಿಶ್ವಕಪ್ ಗೆದ್ದ ತಂಡಗಳನ್ನು ಸನ್ಮಾನಿಸಲಾಯಿತು.

ಬಿನ್ನಿ, ದ್ರಾವಿಡ್, ಮಿಥಾಲಿಗೆ ಜೀವಮಾನ ಸಾಧನೆ ಗೌರವ

1983ರ ವಿಶ್ವಕಪ್ ವಿಜೇತ ಭಾರತ ತಂಡದ ಆಲ್ರೌಂಡರ್ ರೋಜರ್ ಬಿನ್ನಿ, ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಹಾಗೂ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರಿಗೆ ‘ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಭಾರತದ ಕ್ರಿಕೆಟ್ ಸಮೃದ್ಧವಾಗಿ ಬೆಳೆದಿರುವುದನ್ನು ಇಲ್ಲಿ ನೋಡಬಹುದಾಗಿದೆ. ಈ ರೀತಿ ಕ್ರಿಕೆಟ್ ಬೆಳೆಯಲು ಆಟಗರರು ಆಡಳಿತಗಾರರು ಮತ್ತು ಅಭಿಮಾನಿಗಳು ಒಟ್ಟಾಗಿ ಶ್ರಮಿಸಿದ್ದರಿಂದ ಸಾಧ್ಯವಾಗಿದೆ. ಕಳೆದ ಮೂರು ದಶಕಗಳಲ್ಲಿ ಮಹತ್ತರವಾದ ಬೆಳವಣಿಗೆಯನ್ನು ದೇಶದ ಕ್ರಿಕೆಟ್ ದಾಖಲಿಸಿರುವುದನ್ನು ನೋಡುತ್ತಿದ್ದೇನೆ’ ಎಂದು ರಾಹುಲ್ ದ್ರಾವಿಡ್ ಹೇಳಿದರು.

ದ್ರಾವಿಡ್ ಅವರು 1996ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

‘ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ಯಾವಾಗಲೂ ಉತ್ತಮ ಪ್ರತಿಭಾನ್ವಿತರು ಇದ್ದರು. ಅಲ್ಲದೇ ಒಳ್ಳೆಯ ಆಡಳಿತಗಾರರೂ ಇದ್ದರು. ಯಾವಾಗಲೂ ಒಳ್ಳೆಯ ತರಬೇತುದಾರರು ತಂಡಕ್ಕೆ ಲಭಿಸಿದರು. ಇದೆಲ್ಲದರ ಜೊತೆಗೆ ಅತ್ಯಗತ್ಯವಾದ ಮೂಲಸೌಲಭ್ಯಗಳೂ ಲಭಿಸಿದವು. ನಮ್ಮಲ್ಲಿ ಅಮೋಘವಾದ ದೇಶಿ ಕ್ರಿಕೆಟ್ ವ್ಯವಸ್ಥೆ ಇದೆ. ಜೂನಿಯರ್ ಕ್ರಿಕೆಟ್ ವ್ಯವಸ್ಥೆಯೂ ಅತ್ಯದ್ಭುತವಾಗಿದೆ. ಇದೆಲ್ಲಕ್ಕೂ ಕಳಶವಿಟ್ಟಂತೆ ಅಪಾರವಾಗಿ ಪ್ರೀತಿಸುವ ಅಭಿಮಾನಿಗಳಿದ್ದಾರೆ. ವಿಶ್ವದಲ್ಲಿಯೇ ಇಂತಹ ಅಭಿಮಾನಿಗಳ ವಲಯ ಯಾವ ದೇಶಕ್ಕೂ ಸಿಕ್ಕಿಲ್ಲ’ ಎಂದು ಹೇಳಿದರು.

2024ರಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಜಯಿಸಿದ್ದ ಸಂದರ್ಭದಲ್ಲಿ ದ್ರಾವಿಡ್ ಮುಖ್ಯ ಕೋಚ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.