ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಿಗೆ ಪಂದ್ಯದ ಸಂದರ್ಭದಲ್ಲಿ ತಂಡದ ಹೆಚ್ಚುವರಿ ಆಟಗಾರರಿಗೆ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ.

ಬೆಂಚ್ನಲ್ಲಿರುವ ಆಟಗಾರಿಗೆ ಇನ್ನುಮುಂದೆ ಮೈದಾನದಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಬಿಸಿಸಿಐನ ಈ ನಿಯಮ ತಿಳಿಸುತ್ತದೆ. ಅದರಂತೆ ತಂಡವು 11 ಜನರ ಆಡುವ ಬಳಗ ಮತ್ತು ಇತರೆ ಆಟಗಾರರು ಸೇರಿ ಒಟ್ಟು 16 ಆಟಗಾರರು ಮಾತ್ರ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು. ಅವರನ್ನು ಹೊರತುಪಡಿಸಿ ಉಳಿದ ಹೆಚ್ಚುವರಿ ಆಟಗಾರರು ಮೈದಾನಕ್ಕೆ ಬರುವಂತಿಲ್ಲ.

ಕ್ರಿಕ್ಬಜ್ ವರದಿಯ ಪ್ರಕಾರ, ಪಂದ್ಯಾವಳಿಗೆ ಗೊತ್ತುಪಡಿಸಿದ 16 ಆಟಗಾರರನ್ನು ಹೊರತುಪಡಿಸಿ, ಬೇರೆ ಯಾವುದೇ ಆಟಗಾರ ಕೂಡ ಪಾನೀಯ ನೀಡಲು, ಬ್ಯಾಟ್ ಕೊಡಲು ಅಥವಾ ಯಾವುದೇ ಸಂದೇಶವನ್ನು ತಿಳಿಸಲು ಮೈದಾನಕ್ಕೆ ಬರುವಂತಿಲ್ಲ ಎಂದು ಐಪಿಎಲ್ ಆಡಳಿತ ಮಂಡಳಿಯು ಫ್ರಾಂಚೈಸಿಗಳಿಗೆ ತಿಳಿಸಿದೆ.

‘ಪಂದ್ಯದ ಸಮಯದಲ್ಲಿ ಎಲ್ಲಾ ಬದಲಿ ಆಟಗಾರರು ಮೈದಾನದಲ್ಲಿ ತಿರುಗಾಡುವಂತಿಲ್ಲ ಎಂದು ನಮಗೆ ಇತ್ತೀಚೆಗೆ ಸೂಚನೆ ಬಂದಿದೆ. 16 ಮಂದಿ ಆಟಗಾರರನ್ನು ಹೊರತುಪಡಿಸಿ, ಉಳಿದವರು ಪಾನೀಯ ತೆಗೆದುಕೊಂಡು ಹೋಗುವಂತಿಲ್ಲ. ಪಂದ್ಯಕ್ಕೆ ಹೆಸರಿಸಿದ ಆಡುವ 11ರ ಬಳಗದ ಸದಸ್ಯರನ್ನು ಹೊರತುಪಡಿಸಿ ಉಳಿದ ಐವರು ಮಾತ್ರ ಮೈದಾನದ ಒಳಗೆ ಬರಬಹುದು. ಉಳಿದವರು ಡಗೌಟ್ನಲ್ಲಿ ಕುಳಿತುಕೊಳ್ಳಬಹುದು. ಅವರು ಬೌಂಡರಿ ಲೈನ್ ಮತ್ತು LED ಜಾಹೀರಾತು ಫಲಕಗಳ ನಡುವೆ ಕೂಡ ನಡೆದಾಡುವಂತಿಲ್ಲ’ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿರುವುದಾಗಿ ಕ್ರಿಕ್ಬಜ್ ವರದಿ ಮಾಡಿದೆ.

ಆಟದ ಷರತ್ತುಗಳ ನಿಯಮ 11.5.2ರ ಪ್ರಕಾರ, ‘ಬೌಂಡರಿ ಅಂಚಿನಲ್ಲಿ ನಿಂತಿರುವ ಆಟಗಾರನಿಗೆ ಅಥವಾ ಮೈದಾನದಲ್ಲಿ ವಿಕೆಟ್ ಬಿದ್ದಾಗ ಪಾನೀಯ ನೀಡಬಹುದು. ಆ ಸಂದರ್ಭದಲ್ಲಿ ಸಮಯ ವ್ಯರ್ಥವಾಗುವುದಿಲ್ಲ. ಅಂಪೈರ್ಗಳ ಅನುಮತಿಯಿಲ್ಲದೆ ಬೇರೆ ಯಾವುದೇ ಪಾನೀಯಗಳನ್ನು ಮೈದಾನಕ್ಕೆ ತೆಗೆದುಕೊಂಡು ಹೋಗಬಾರದು. ಮೈದಾನಕ್ಕೆ ಪಾನೀಯಗಳನ್ನು ತೆಗೆದುಕೊಂಡು ಹೋಗುವ ಆಟಗಾರ ತಂಡದ ಉಡುಪನ್ನು ಧರಿಸಿರಬೇಕು’ ಎಂದು ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.