ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯಗಳು
ವಲಯ ಮಟ್ಟಕ್ಕೆ ಮರಳಿರುವ ದುಲೀಪ್ ಟ್ರೋಫಿ ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಆಗಸ್ಟ್– ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಎಸ್‌ಎಂಎಟಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಂಬೈ, ಮೊಹಾಲಿ, ವಿಶಾಖಪಟ್ಟಣ ಮತ್ತು ಕೋಲ್ಕತ್ತ ದಲ್ಲಿ ನಡೆಯಲಿವೆ. ನಾಕೌಟ್ ಹಂತ ನಾಗ್ಪುರದಲ್ಲಿ ನಡೆಯಲಿದೆ.