ಗುರುವಾರ , ಜನವರಿ 28, 2021
18 °C

ಮುಲಂಪುರ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಜಯ್ ಶಾ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡಿಗಡ: ಪಂಜಾಬ್ ಕ್ರಿಕೆಟ್ ಸಂಸ್ಥೆಯು ಮುಲಂಪುರದಲ್ಲಿ ನಿರ್ಮಿಸಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭೇಟಿ ನೀಡಿದರು.

ಮೊಹಾಲಿಯಲ್ಲಿರುವ ಪಿಸಿಎ ಕ್ರೀಡಾಂಗಣದಿಂದ 20 ನಿಮಿಷಗಳ ಪ್ರಯಾಣ ಮಾಡಿದರೆ ಮುಲಂಪುರ ಕ್ರೀಡಾಂಗಣವಿದೆ. ಜಯ್ ಶಾ ಅವರೊಂದಿಗೆ ಪಿಸಿಎ ಅಧ್ಯಕ್ಷ ರಾಜೀಂದರ್ ಗುಪ್ತಾ ಮತ್ತು ಕಾರ್ಯದರ್ಶಿ ಪುನೀತ್ ಬಾಲಿ ಇದ್ದರು.

’ಹೊಸ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಶಾ ಅವರು ಸುಮಾರು 20 ನಿಮಿಷಗಳ ಕಾಲ ಪರಿಶೀಲಿಸಿದರು‘ ಎಂದು ಬಾಲಿ ತಿಳಿಸಿದರು.

ಈ ಕ್ರೀಡಾಂಗಣವು ಪಂದ್ಯಗಳನ್ನು ಸಂಘಟಿಸಲು ಸಿದ್ಧವಾಗಿದೆ. ಇನ್ನೂ ಕೆಲವು ಸಣ್ಣಪುಟ್ಟ ಸೌಲಭ್ಯಗಳ ಅಭಿವೃದ್ಧಿ ಕೆಲಸವು ನಡೆಯುತ್ತಿದೆ. ಕೆಲವು ತಿಂಗಳುಗಳಲ್ಲಿ ಸಂಪೂರ್ಣವಾಗಲಿದೆ ಎಂದು ಬಾಲಿ ತಿಳಿಸಿದರು.

ಚಂಡಿಗಡದ ಸೆಕ್ಟರ್ 16ರಲ್ಲಿರುವ ಕ್ರೀಡಾಂಗಣಕ್ಕೆ ಶಾ ಅವರು ಸೋಮವಾರ ಭೇಟಿ ನೀಡಿದ್ದರು.  ಯುಟಿಸಿಎ ನಿರ್ಮಿಸುತ್ತಿರುವ ಇನ್ನೊಂದು ಕ್ರಿಕೆಟ್ ಮೈದಾನಕ್ಕೂ ಶಾ ಮಂಗಳವಾರ ಭೇಟಿ ನೀಡಿದರು. 

’ವಿಶ್ವದರ್ಜೆಯ ಕ್ರೀಡಾಂಗಣ, ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಡೆಹ್ರಾಡೂನ್ ಕ್ರೀಡಾಂಗಣ ಮತ್ತು ಮಸೂರಿ ಅಕಾಡೆಮಿಗಳು ಯುವ ಆಟಗಾರರ ತರಬೇತಿಗೆ ವೇದಿಕೆಯಾಗಲಿವೆ. ಬಿಸಿಸಿಐ ಮಾರ್ಗದರ್ಶನದಲ್ಲಿ ಈ ಕ್ರೀಡಾಂಗಣಗಳು ಉತ್ತಮವಾಗಿ ಬೆಳೆಯಲಿವೆ‘ ಎಂದು ಜಯ್ ಶಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು