ಶನಿವಾರ, ಏಪ್ರಿಲ್ 1, 2023
25 °C

ಐಪಿಎಲ್‌ನಲ್ಲಿ ಕೋವಿಡ್‌ ಪರೀಕ್ಷೆ: ₹10 ಕೋಟಿ ವ್ಯಯಿಸಲಿರುವ ಬಿಸಿಸಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕೋವಿಡ್‌–19 ಸೋಂಕು ಪರೀಕ್ಷೆಗಾಗಿ ಅಂದಾಜು ₹ 10 ಕೋಟಿ ವೆಚ್ಚ ಮಾಡಲಿದೆ.

ಸೆಪ್ಟೆಂಬರ್‌ 19ರಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್ ‌ನಲ್ಲಿ (ಯುಎಇ) ನಡೆಯಲಿರುವ ಐಪಿಎಲ್‌ ಟೂರ್ನಿಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಪರೀಕ್ಷೆಗಳು ನಡೆಯಲಿವೆ.

ಭಾರತದಲ್ಲಿ ನಡೆಸಿದ ಕೋವಿಡ್‌ ಪರೀಕ್ಷೆಗಳ ವೆಚ್ಚವನ್ನು ಫ್ರ್ಯಾಂಚೈಸ್‌ಗಳೇ ಭರಿಸಿದ್ದವು. ಯುಎಇಯಲ್ಲಿ ಆಗಸ್ಟ್‌ 20ರಿಂದ ನಡೆಯುತ್ತಿರುವ ಆರ್‌ಟಿ–ಪಿಸಿಆರ್‌ ಪರೀಕ್ಷೆಗಳ ಖರ್ಚನ್ನು ಬಿಸಿಸಿಐ ನೋಡಿಕೊಳ್ಳುತ್ತಿದೆ.

’ಕೋವಿಡ್‌ ಪರೀಕ್ಷೆಯನ್ನು ವಿಪಿಎಸ್‌ ಹೆಲ್ತ್‌ಕೇರ್‌ ಸಂಸ್ಥೆಗೆ ವಹಿಸಲಾಗಿದೆ. ಆಟಗಾರರು ಹಾಗೂ ಸಿಬ್ಬಂದಿಗೆ ಸೇರಿ ಅಂದಾಜು 20 ಸಾವಿರಕ್ಕಿಂತ ಹೆಚ್ಚಿನ ಪರೀಕ್ಷೆಗಳು ನಡೆಯಬಹುದು. ಪ್ರತಿ ಟೆಸ್ಟ್‌ಗೆ ಬಿಸಿಸಿಐ ಅಂದಾಜು ₹ 4000 (ತೆರಿಗೆ ಹೊರತುಪಡಿಸಿ) ಖರ್ಚು ಮಾಡಲಿದೆ. ವಿಪಿಎಸ್‌ ಸಂಸ್ಥೆಯ 75 ಸಿಬ್ಬಂದಿ ಕೋವಿಡ್‌ ತಪಾಸಣೆ ನಡೆಸಲಿದ್ದಾರೆ‘ ಎಂದು ಐಪಿಎಲ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಆಟಗಾರರು ಹಾಗೂ ಅಧಿಕಾರಿಗಳ ಸುರಕ್ಷತೆ ನಮ್ಮ ಆದ್ಯತೆ. ಹೀಗಾಗಿ ಆರೋಗ್ಯ ಸಿಬ್ಬಂದಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ‘ ಎಂದು ಅವರು ಹೇಳಿದರು.

‘ಆರೋಗ್ಯ ಸಿಬ್ಬಂದಿಯ ಹೊಟೇಲ್‌ ಖರ್ಚನ್ನು ಬಿಸಿಸಿಐ ಪಾವತಿಸುತ್ತಿಲ್ಲ. ಅದನ್ನು ಹೆಲ್ತ್‌ಕೇರ್‌ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಆಗಸ್ಟ್‌ 20ರಿಂದ 28ರವರೆಗೆ 1988 ಪರೀಕ್ಷೆಗಳನ್ನು ನಡೆಸಲಾಗಿದೆ‘ ಎಂದು ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು