ಬೆಂಗಳೂರಿಗೆ ಚತುಷ್ಕೋನ ಕ್ರಿಕೆಟ್ ಸರಣಿ ಸ್ಥಳಾಂತರ

7

ಬೆಂಗಳೂರಿಗೆ ಚತುಷ್ಕೋನ ಕ್ರಿಕೆಟ್ ಸರಣಿ ಸ್ಥಳಾಂತರ

Published:
Updated:

ನವದೆಹಲಿ: ಆಂಧ್ರದ ವಿಜಯವಾಡದಲ್ಲಿ ಆಯೋಜಿಸಲಾಗಿದ್ದ ಚತುಷ್ಕೋನ ಕ್ರಿಕೆಟ್ ಸರಣಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಈ ಸರಣಿಯಲ್ಲಿ ಭಾರತ ಎ, ಭಾರತ ಬಿ, ದಕ್ಷಿಣ ಆಫ್ರಿಕಾ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಆಡಲಿವೆ. ಆಗಸ್ಟ್‌ 23 ರಿಂದ 30ರವರೆಗೆ ಪಂದ್ಯಗಳು ನಡೆಯಲಿವೆ.

‘ಭಾನುವಾರ ಮುಳಪಾಡು ಮತ್ತು ವಿಜಯವಾಡದಲ್ಲಿ ನಡೆಯಬೇಕಿದ್ದ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಮುಂದಿನ ದಿನಗಳಲ್ಲಿಯೂ ಮಳೆ ಬರುವ ಸಾಧ್ಯತೆಯನ್ನು ಹವಾಮಾನ ಇಲಾಖೆಯು ನೀಡಿದೆ. ಆದ್ದರಿಂದ ನಾಲ್ಕು ತಂಡಗಳ ನಾಯಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.

ಚತುಷ್ಕೋನ ಸರಣಿ ವೇಳಾಪಟ್ಟಿ

ದಿನಾಂಕ; ಪಂದ್ಯ;ಸ್ಥಳ

ಆ. 23; ಭಾರತ ಎ–ಆಸ್ಟ್ರೇಲಿಯಾ ಎ;ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಅ. 23; ಭಾರತ ಬಿ–ದಕ್ಷಿಣ ಆಫ್ರಿಕಾ ಎ; ಆಲೂರು

ಆ. 24; ಕಾಯ್ದಿಟ್ಟ ದಿನ;ಬೆಂಗಳೂರು

ಆ. 25; ಭಾರತ ಎ–ಭಾರತ ಬಿ;ಆಲೂರು

ಆ. 25; ದಕ್ಷಿಣ ಆಫ್ರಿಕಾ ಎ –ಆಸ್ಟ್ರೇಲಿಯಾ ಎ;ಚಿನ್ನಸ್ವಾಮಿ ಕ್ರೀಡಾಂಗಣ

ಆ. 26; ಕಾಯ್ದಿಟ್ಟ ದಿನ;ಆಲೂರು

ಆ.27;ಭಾರತ ಎ–ದಕ್ಷಿಣ ಆಫ್ರಿಕಾ ಎ; ಚಿನ್ನಸ್ವಾಮಿ ಕ್ರೀಡಾಂಗಣ

ಆ.27;ಭಾರತ ಬಿ–ಆಸ್ಟ್ರೇಲಿಯಾ ಎ; ಆಲೂರು

ಆ.28;ಕಾಯ್ದಿಟ್ಟ ದಿನ;ಚಿನ್ನಸ್ವಾಮಿ ಕ್ರೀಡಾಂಗಣ

ಆ.29; ಫೈನಲ್ ; ಚಿನ್ನಸ್ವಾಮಿ ಕ್ರೀಡಾಂಗಣ

ಆ.29; 3ಮತ್ತು 4ನೇ ಸ್ಥಾನದ ತಂಡಗಳು; ಆಲೂರು

ಆ. 30; ಕಾಯ್ದಿಟ್ಟ ದಿನ;ಬೆಂಗಳೂರು

 ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !