ಮಹಿಳಾ ತಂಡ ಪ‍್ರಕಟಿಸಿದ ಬಿಸಿಸಿಐ

ಸೋಮವಾರ, ಏಪ್ರಿಲ್ 22, 2019
32 °C

ಮಹಿಳಾ ತಂಡ ಪ‍್ರಕಟಿಸಿದ ಬಿಸಿಸಿಐ

Published:
Updated:
Prajavani

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ),  23 ವರ್ಷದೊಳಗಿನವರ ಮಹಿಳಾ ಏಕದಿನ ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಭಾನುವಾರ ಇಂಡಿಯಾ ರೆಡ್‌, ಇಂಡಿಯಾ ಗ್ರೀನ್‌ ಮತ್ತು ಇಂಡಿಯಾ ಬ್ಲೂ ತಂಡಗಳನ್ನು ಪ್ರಕಟಿಸಿದೆ.

ಮಹಿಳಾ ಚಾಲೆಂಜರ್‌ ಟೂರ್ನಿ, ಏಪ್ರಿಲ್‌ 20ರಿಂದ 24ರವರೆಗೆ ರಾಂಚಿಯಲ್ಲಿ ನಡೆಯಲಿದೆ. ಹರ್ಲೀನ್‌ ಡಿಯೊಲ್‌, ಸುಶ್ರೀ ದಿವ್ಯದರ್ಶಿನಿ ಮತ್ತು ದೇವಿಕಾ ವೈದ್ಯ ಅವರು ಕ್ರಮವಾಗಿ ರೆಡ್‌, ಗ್ರೀನ್‌ ಮತ್ತು ಬ್ಲೂ ತಂಡಗಳನ್ನು ಮುನ್ನಡೆಸಲಿದ್ದಾರೆ.

ಪ್ರತಿ ತಂಡದಲ್ಲೂ ತಲಾ 13 ಮಂದಿ ಆಟಗಾರ್ತಿಯರಿಗೆ ಸ್ಥಾನ ನೀಡಲಾಗಿದೆ.

ತಂಡಗಳು ಇಂತಿವೆ: ಇಂಡಿಯಾ ರೆಡ್‌: ಹರ್ಲೀನ್‌ ಡಿಯೊಲ್‌ (ನಾಯಕಿ), ಆರ್‌.ಕಲ್ಪನ (ವಿಕೆಟ್‌ ಕೀಪರ್‌), ಎಸ್‌.ಮೇಘನಾ, ರಿಧಿಮಾ ಅಗರವಾಲ್, ರುಜು ಸಹಾ, ತೇಜಲ್‌ ಹಸಬ್ನಿಸ್‌, ಸಿ.ಎಚ್‌.ಜಾನ್ಸಿಲಕ್ಷ್ಮಿ, ರೇಣುಕಾ ಚೌಧರಿ, ತೇಜಸ್ವಿನಿ ದುರಾಗದ್‌, ಅರುಂಧತಿ ರೆಡ್ಡಿ, ಶಾಂತಿ ಕುಮಾರಿ, ದೇವಯಾನಿ ಪ್ರಸಾದ್‌ ಮತ್ತು ಸುಮನ್‌ ಮೀನಾ.

ಇಂಡಿಯಾ ಗ್ರೀನ್‌: ಸುಶ್ರೀ ದಿವ್ಯದರ್ಶಿನಿ (ನಾಯಕಿ), ಶಿವಾಲಿ ಶಿಂಧೆ (ವಿಕೆಟ್‌ ಕೀಪರ್‌), ಪ್ರಿಯಾ ಪುನಿಯಾ, ಯಾಸ್ತಿಕಾ ಭಾಟಿಯಾ, ಆಯುಷಿ ಗರ್ಗ್‌, ಐ.ವಿ.ದೃಶ್ಯ, ಏಕ್ತಾ ಸಿಂಗ್‌, ರಾಧಾ ಯಾದವ್‌, ರಾಶಿ ಕನೋಜಿಯಾ, ಮನಾಲಿ ದಕ್ಷಿಣಿ, ರೇಣುಕಾ ಸಿಂಗ್‌, ಎ.ಅಕ್ಷಯ ಮತ್ತು ಎ.ಅನುಷಾ.

ಇಂಡಿಯಾ ಬ್ಲೂ: ದೇವಿಕಾ ವೈದ್ಯ (ನಾಯಕಿ), ನುಜತ್‌ ಪ‍ರ್ವೀನ್‌ (ವಿಕೆಟ್‌ ಕೀಪರ್‌), ಶೆಫಾಲಿ ವರ್ಮಾ, ಸಿಮ್ರನ್‌, ತನುಶ್ರೀ ಸರ್ಕಾರ್‌, ‍ಪ್ರತಿವಾ ರಾಣಾ, ಮಿನ್ನು ಮಣಿ, ತನುಜಾ ಕನ್ವರ್‌, ಸಿ.ಪ್ರತ್ಯೂಷಾ, ಸಿಮ್ರನ್‌ ದಿಲ್‌ ಬಹದ್ದೂರ್‌, ಕ್ಷಮಾ ಸಿಂಗ್‌, ವೃಷಾಲಿ ಭಗತ್‌ ಮತ್ತು ಇಂದ್ರಾಣಿ ರಾಯ್‌.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !