ಬೆಂಗಳೂರು: ಸಲೋನಿ ಪಿ. (ಔಟಾಗದೇ 50; 15ಕ್ಕೆ 3) ಅವರ ಆಲ್ರೌಂಡ್ ಆಟದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 79 ರನ್ಗಳಿಂದ ಬರೋಡಾ ತಂಡವನ್ನು ಮಣಿಸಿತು.

ಜೈಪುರದ ಜೈಪುರಿ ವಿದ್ಯಾಲಯ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬರೋಡಾ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಸಲೋನಿ ಅವರ ಅಜೇಯ ಅರ್ಧಶತಕದ ಬಲದಿಂದ ಕರ್ನಾಟಕ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗೆ 232 ರನ್ ಗಳಿಸಿತು. ಎಂಟನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಸಲೋನಿ 44 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್ ಸೇರಿ 50 ರನ್ ಬಾರಿಸಿದರು. ಆರಂಭ ಆಟಗಾರ್ತಿ ರಚಿತಾ ಹತ್ವಾರ್ (45) ಉಪಯುಕ್ತ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟಿದ ಬರೋಡಾ ತಂಡವು 37.2 ಓವರ್ಗಳಲ್ಲಿ 153 ರನ್ ಗಳಿಸಿ ಹೋರಾಟ ಮುಗಿಸಿತು. ವಿಧಿ ಎಚ್. ಪರಮಾರ್ (54;79ಎ) ಏಕಾಂಗಿ ಹೋರಾಟ ನಡೆಸಿದರು. ಸಲೋನಿ ಮೂರು ವಿಕೆಟ್ ಪಡೆದರೆ, ಮಿಥಿಲಾ ವಿನೋದ್ ಮತ್ತು ಪೂಜಾ ಕುಮಾರಿ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್ಗಳಲ್ಲಿ 8 ವಿಕೆಟ್ಗೆ 232 (ರಚಿತಾ ಹಲ್ವಾರ್ 45, ನಿಕಿ ಪ್ರಸಾದ್ 23, ಮಿಥಿಲಾ ವಿನೋದ್ 37, ಶ್ರೇಯಾ ಎಸ್. ಚೌಹಾನ್ 34, ಸಲೋನಿ ಪಿ. ಔಟಾಗದೇ 50; ವಿಧಿ ಎಚ್.ಪರಮಾರ್ 35ಕ್ಕೆ 2, ರಾಥೋಡ್ ಜಾನಕಿ 48ಕ್ಕೆ 2). ಬರೋಡಾ: 37.2 ಓವರ್ಗಳಲ್ಲಿ 153 (ನೇಹಾ ಜಿ. ಪಟೇಲ್ 23, ವಿಧಿ ಎಚ್. ಪರಮಾರ್ 54; ಮಿಥಿಲಾ ವಿನೋದ್ 24ಕ್ಕೆ 2, ಪೂಜಾ ಕುಮಾರಿ 18ಕ್ಕೆ 2, ಸಲೋನಿ ಪಿ. 15ಕ್ಕೆ 3). ಫಲಿತಾಂಶ: ಕರ್ನಾಟಕಕ್ಕೆ 79 ರನ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.