ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಮಹಿಳೆಯರ 23 ವರ್ಷದೊಳಗಿನವರ ಕ್ರಿಕೆಟ್: ಶೀತಲ್‌ ಆಕರ್ಷಕ ಬೌಲಿಂಗ್‌

Last Updated 12 ಡಿಸೆಂಬರ್ 2019, 11:22 IST
ಅಕ್ಷರ ಗಾತ್ರ

ಪುದುಚೇರಿ: ಶೀತಲ್‌ ರಾಣಾ (14ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಭಾರತ ‘ಸಿ’ ತಂಡ ಬಿಸಿಸಿಐ ಮಹಿಳೆಯರ 23 ವರ್ಷದೊಳಗಿನವರ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 6 ರನ್‌ಗಳಿಂದ ಭಾರತ ‘ಬಿ’ ತಂಡವನ್ನು ಮಣಿಸಿದೆ.

ಇಲ್ಲಿನ ಸಿಯೆಚೆಮ್‌ ಮೈದಾನದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಪ್ರತಿವಾ ಮುಂದಾಳತ್ವದ ಭಾರತ ‘ಸಿ’ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111ರನ್‌ ಗಳಿಸಿತು.

ಸುಲಭ ಗುರಿ ಬೆನ್ನಟ್ಟಿದ ಆಯುಷಿ ಸೋನಿ ಸಾರಥ್ಯದ ಭಾರತ ‘ಬಿ’ ತಂಡವು 7 ವಿಕೆಟ್‌ ಕಳೆದುಕೊಂಡು 105ರನ್‌ ಪೇರಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌
ಭಾರತ ‘ಸಿ’: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111

ಕಾಜಲ್‌ ಜೆನಾ 16, ಇಂದ್ರಾಣಿ ರಾಯ್‌ 25, ರಶ್ಮಿ 28, ಕನಿಕಾ ಅಹುಜಾ ಔಟಾಗದೆ 11, ಯು.ಎ.ಪವಾರ್‌ 18, ಶೀತಲ್‌ ರಾಣಾ 6; ರಾಶಿ ಕನೋಜಿಯಾ 21ಕ್ಕೆ1, ಮಿನ್ನು ಮಣಿ 8ಕ್ಕೆ1, ವೃಷಾಲಿ ಭಗತ್‌ 17ಕ್ಕೆ4, ಆಯುಷಿ ಸೋನಿ 15ಕ್ಕೆ1

ಭಾರತ ‘ಬಿ’: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 105
ವೃಷಾಲಿ ಭಗತ್‌ 38, ಟಿ.ಎಸ್‌.ಹಸಬ್ನಿಸ್‌ 47; ಜಾಹ್ನವಿ 18ಕ್ಕೆ1, ಶೀತಲ್‌ ರಾಣಾ 14ಕ್ಕೆ5

ಫಲಿತಾಂಶ: ಭಾರತ ‘ಸಿ’ ತಂಡಕ್ಕೆ 6ರನ್‌ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT