ಬೆಂಗಳೂರು: ನಿಕಿ ಪ್ರಸಾದ್ ಅವರ ಶತಕ, ರಚಿತಾ ಹತ್ವಾರ್ ಅವರ 92 ರನ್ ಮತ್ತು ವಂದಿತಾ ರಾವ್ (17ಕ್ಕೆ4) ಅವರ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ, ಬಿಸಿಸಿಐ ಮಹಿಳೆಯರ 23 ವರ್ಷದೊಳಗಿನವರ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಛತ್ತೀಸಗಢ ತಂಡದ ಮೇಲೆ 234 ರನ್ಗಳ ನಿರಾಯಸ ಗೆಲುವು ಪಡೆಯಿತು.

ಜೈಪುರದ ಆರ್ಸಿಎ ಅಕಾಡೆಮಿ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರುಗಳಲ್ಲಿ 7 ವಿಕೆಟ್ಗೆ 361 ರನ್ ಗಳಿಸಿತು. ನಿಕಿ 91 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ಗಳಿದ್ದ 123 ರನ್ ಗಳಿಸಿದರು. ಆರಂಭ ಆಟಗಾರ್ತಿ ರಚಿತಾ 97 ಎಸೆತಗಳಲ್ಲಿ 92 ರನ್ ಹೊಡೆದರು. ರಚಿತಾ ಹತ್ವಾರ್ ಸಹ ಅರ್ಧ ಶತಕ (53) ಗಳಿಸಿದರು.

ಛತ್ತೀಸಗಢ ತಂಡ ಯಾವ ಹಂತದಲ್ಲೂ ಹೋರಾಟ ತೋರಲಿಲ್ಲ. 35 ಓವರುಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು.

ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಬಿಹಾರ ವಿರುದ್ಧ ಇದೇ 11ರಂದು ಆಡಲಿದೆ.

ಸ್ಕೋರುಗಳು

ಕರ್ನಾಟಕ: 50 ಓವರುಗಳಲ್ಲಿ 7ಕ್ಕೆ 361 (ರಚಿತಾ ಹತ್ವಾರ್ 92, ನಿಕಿ ಪ್ರಸಾದ್ 123, ಚಾಂದಸಿ ಕೆ 53, ಶ್ರೇಯಾ ಎಸ್.ಚವಾಣ್ 35; ಸಾಕ್ಷಿ ಶುಕ್ಲಾ 45ಕ್ಕೆ2, ರಿಶಿಕಾ ಶ್ರೀವಾಸ್ತವ 61ಕ್ಕೆ2, ರಾಧಿಕಾ ನೇತಂ 45ಕ್ಕೆ2)

ಛತ್ತೀಸಗಢ: 35 ಓವರುಗಳಲ್ಲಿ 127 (ಐಶ್ವರ್ಯಾ ಸಿಂಗ್ 32, ಕುಮುದ್ ಸಾಹು 27; ಪೂಜಾ ಕುಮಾರ್ ಎಂ. 16ಕ್ಕೆ2, ವಂದಿತಾ ಕೆ.ರಾವ್ 17ಕ್ಕೆ4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.