ಭಾನುವಾರ, ಮೇ 9, 2021
25 °C

ಮನೆಯಲ್ಲಿ ಸುರಕ್ಷಿತವಾಗಿರಿ: ಪೂಜಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮನೆಯೊಳಗೆ ಇದ್ದು ಮಾತ್ರ ಕೊವಿಡ್ –19 ಮಹಾಮಾರಿಯನ್ನು ಸೋಲಿಸಲು ಸಾಧ್ಯ ಎಂದು ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರೀಡಾಪಟುಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಪೂಜಾರ ಕೂಡ ಭಾಗಿಯಾಗಿದ್ದರು.  ಈ ಕುರಿತು ಅವರು ಮಾತನಾಡಿದ್ದಾರೆ.

‘ಹೋರಾಟದಲ್ಲಿ ಜನರು ಮತ್ತು ಕ್ರೀಡಾಪಟುಗಳಲ್ಲಿ  ಆತ್ಮವಿಶ್ವಾಸ ತುಂಬುವ ಸ್ಫೂರ್ತಿದಾಯಕ ಕಾರ್ಯವನ್ನು ಮಾಡಬೇಕೆಂದು ಮೋದಿಯವರು ಹೇಳಿದ್ದಾರೆ’ ಎಂದಿದ್ದಾರೆ.

‘ಜನರು ಈ ಪರಿಸ್ಥಿತಿಯಲ್ಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈರಸ್‌ ಸೋಂಕಿನ ಕುರಿತು ಯಾವುದೇ ರೀತಿಯ ಉಡಾಫೆ ಸಲ್ಲದು. ಪ್ರತಿಯೊಬ್ಬರೂ ಯೋಧನಂತೆ ಹೋರಾಡುವ ಸ್ಥಿತಿ ಇದು. ದೇಶಕ್ಕಾಗಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಇದು. ಅದಕ್ಕಾಗಿ ತಮ್ಮ ಕುಟುಂಬದೊಂದಿಗೆ ಮನೆಯೊಳಗೆ ನೆಮ್ಮದಿಯಾಗಿರಿ’ ಎಂದು ಪೂಜಾರ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು