ಬೆಳಗಾವಿ: ‘ಇಲ್ಲಿನ ಯೂನಿಯನ್ ಜಿಮ್ಖಾನಾ ಮೈದಾನದಲ್ಲಿ ಏ.18, 19ರಂದು ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜಿಸಲಾಗಿದೆ. ಇದರಲ್ಲಿ ಕ್ರಿಕೆಟ್ ಪ್ರಿಯರು ದೊಡ್ಡ ಪರದೆ ಮೇಲೆ ಪಂದ್ಯಗಳನ್ನು ನೋಡಿ ಆನಂದಿಸಬಹುದು’ ಎಂದು ಬಿಸಿಸಿಐ (ಕಾರ್ಯಾಚರಣೆ ವಿಭಾಗ) ಮುಖ್ಯ ವ್ಯವಸ್ಥಾಪಕ ಆಲ್ವಿನ್ ಗಾಯಕವಾಡ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ‘ಐಪಿಎಲ್ನ ಹಿಂದಿನ ಆವೃತ್ತಿಗಳಲ್ಲಿ ನಗರದಲ್ಲಿ ಆಯೋಜಿಸಿದ್ದ ಫ್ಯಾನ್ ಪಾರ್ಕ್ಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಈ ವರ್ಷವೂ ಆಯೋಜಿಸಿದ್ದೇವೆ’ ಎಂದರು.

‘18ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ, ಸಂಜೆ 7.30ಕ್ಕೆ ನಡೆಯುವ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಪಂದ್ಯ, 19ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಕೋಲ್ಕತ್ತ ನೈಟ್ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ, 7.30ಕ್ಕೆ ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ಜೈಂಟ್ಸ್ ನಡುವಿನ ಪಂದ್ಯಗಳನ್ನು ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು’ ಎಂದು ತಿಳಿಸಿದರು.

‘ಪ್ರದರ್ಶನಕ್ಕಾಗಿ ದ್ವಾರಗಳನ್ನು ಮಧ್ಯಾಹ್ನ 2.30ಕ್ಕೆ ತೆರೆಯಲಾಗುವುದು. ಐಪಿಎಲ್ ಅಧಿಕೃತ ಪ್ರಾಯೋಜಕರು ಆಹಾರ ಮಳಿಗೆ ತೆರೆಯುತ್ತಾರೆ. ಕೆಲವು ಮೋಜಿನ ಚಟುವಟಿಕೆ ನಡೆಸುತ್ತಾರೆ. ಅಭಿಮಾನಿಗಳಿಗೆ ಲಕ್ಕಿ ಡ್ರಾ ಕೂಪನ್ ಸಹ ವಿತರಿಸಲಾಗುವುದು’ ಎಂದು ಹೇಳಿದರು.

ಕೆಎಸ್ಸಿಎ ಸದಸ್ಯ ಅವಿನಾಶ ಪೋತದಾರ, ‘ಐಪಿಎಲ್ ಪಂದ್ಯ ಆಯೋಜಿಸದ ಸ್ಥಳಗಳಲ್ಲಿ ಫ್ಯಾನ್ ಪಾರ್ಕ್ ಆಯೋಜಿಸಲಾಗಿದೆ. ಇದು ಅಭಿಮಾನಿಗಳಿಗೆ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ವೀಕ್ಷಿಸಿದ ಅನುಭವ ನೀಡುತ್ತದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-21-1419215369

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.